ಶನಿವಾರ, ಆಗಸ್ಟ್ 20, 2022
21 °C
ಫುಟ್‌ಬಾಲ್ ದಂತಕಥೆ ಪೆಲೆ ಪತ್ರ

’ಐ ಲವ್‌ ಯೂ ಡಿಯೆಗೊ..‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಯೊ ಡಿ ಜನೈರೊ (ಎಎಫ್‌ಪಿ): ’ಐ ಲವ್‌ ಯೂ ಡಿಯೆಗೊ.‘ ಎಂದು ಬ್ರೆಜಿಲ್‌ನ ಫುಟ್‌ಬಾಲ್ ದಂತಕಥೆ ಪೆಲೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಈಚೆಗೆ ನಿಧನರಾದ ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಡಿಯೆಗೊ ಮರಡೋನಾಗೆ ಪೆಲೆ ಗೌರವ ಸಲ್ಲಿಸಿದ್ದಾರೆ. ತಮ್ಮ ಆಪ್ತ ಮಿತ್ರನ ನಿಧನದ ಒಂದು ವಾರದ ನಂತರ ಪೆಲೆ ಈ ಸಂದೇಶ ಹಾಕಿದ್ದಾರೆ.

ತಮ್ಮ ಆಪ್ತರ ನಿಧನದ ಒಂದು ವಾರದ ನಂತರ ಗೌರವ ಸಲ್ಲಿಸುವುದು ಬ್ರೆಜಿಲ್ ಸಂಸ್ಕೃತಿಯಲ್ಲಿ ಸರ್ವೇಸಾಮಾನ್ಯ. ಕ್ಯಾಥೋಲಿಕ್ ಆಗಿರುವ ಪೆಲೆ ’ಸಪ್ತ ದಿನದ ಪ್ರಾರ್ಥನೆ‘ ಆಚರಿಸಿದರು.

ಪೆಲೆ ಮತ್ತು ಮರಡೋನಾ ಅವರಿಬ್ಬರಲ್ಲಿ ಯಾರು ಮಹಾನ್ ಸಾಧಕರು ಎಂಬ ಚರ್ಚೆಗಳು ಹಲವು ಬಾರಿ ನಡೆದಿದ್ದವು.

ಇಂತಹ ಚರ್ಚೆಗಳಿಗೆ  ಬುಧವಾರ ಪೆಲೆ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತೆರೆ ಎಳೆದಿದ್ದಾರೆ. 

’ಒಬ್ಬರನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದನ್ನು ಬಿಟ್ಟು, ಇಬ್ಬರ ಸಾಧನೆಯನ್ನೂ ಗೌರವಿಸುತ್ತ ಹೋದರೆ ವಿಶ್ವವು ಸಹನೀಯ ತಾಣವಾಗುತ್ತದೆ. ಆದ್ದರಿಂದಲೇ ನೀನು (ಮರಡೋನಾ) ಯಾವಾಗಲೂ ಹೋಲಿಕೆಯ ಆಚೆ ಇರುವ ಮಹಾನ್‌ ವ್ಯಕ್ತಿ‘ ಎಂದು ಬರೆದಿದ್ದಾರೆ.

ಇದೇ ಪೋಸ್ಟ್‌ನಲ್ಲಿ ತಾವು ಮರಡೋನಾ ಜೊತೆಗಿರುವ ಚಿತ್ರಗಳನ್ನೂ ಹಾಕಿದ್ದಾರೆ.  ಬ್ರೆಜಿಲ್ ತಂಡಕ್ಕೆ ಮೂರು ಸಲ ವಿಶ್ವಕಪ್ ಜಯಿಸಿಕೊಟ್ಟವರು ಪೆಲೆ.

’ನಿಮ್ಮ ಕ್ರೀಡೆ ಮತ್ತು ಜೀವನ ಪಯಣವು ಪ್ರಾಮಾಣಿಕವಾಗಿತ್ತು. ನಿಮ್ಮದೇ ಆದ ರೀತಿಯಲ್ಲಿ ಎಲ್ಲ ಸತ್ಯಗಳನ್ನೂ ಹೊರಜಗತ್ತಿಗೆ ತೆರೆದಿಟ್ಟಿದ್ದೀರಿ. ನಿಮಗೆ ಪ್ರಿಯವಾದ ಮತ್ತು ಪ್ರಿಯವಲ್ಲದ ಸಂಗತಿಗಳನ್ನು ಬಹಿರಂಗಗೊಳಿಸಿದ್ದೀರಿ. ಪ್ರೀತಿಸುವುದನ್ನು ನಮಗೆ ಕಲಿಸಿದ್ದೀರಿ. ಐ ಲವ್‌ ಯೂ..‘ ಎಂದೂ ಪೆಲೆ ಬರೆದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು