ನವದೆಹಲಿ: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ನಾರ್ತ್ಸ್ಟ್ಯಾಂಡ್ನಿಂದ ತಮ್ಮ ಹೆಸರನ್ನು ತೆಗೆದುಹಾಕುವಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ (ಎಚ್ಸಿಎ) ಒಂಬುಡ್ಸ್ಮನ್ ನೀಡಿರುವ ಆದೇಶಕ್ಕೆ ತಡೆ ಕೋರಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರುವುದಾಗಿ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಯೋಚಿಸಿದ್ದಾರೆ.

ಎಚ್ಸಿಎನ ‘ಎತಿಕ್ಸ್ ಆಫೀಸರ್’ ಆಗಿರುವ ನ್ಯಾಯಮೂರ್ತಿ (ನಿವೃತ್ತ) ಈಶ್ವರಯ್ಯ ಅವರು ಎಚ್ಸಿಎನ ಸದಸ್ಯ ಘಟಕವಾದ ಲಾರ್ಡ್ಸ್ ಕ್ರಿಕೆಟ್ ಕ್ಲಬ್ ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಈ ಆದೇಶ ಹೊರಡಿಸಿದ್ದರು. ಈ ಹಿಂದೆ ಎಚ್ಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಅಜರುದ್ದೀನ್ ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡಿದ್ದರು ಎಂದು ಅರ್ಜಿಯಲ್ಲಿ ಕ್ಲಬ್ ಆರೋಪಿಸಿತ್ತು.

2019ರ ಡಿಸೆಂಬರ್ನಲ್ಲಿ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಹಾಜರಾಗಿ ಅವರು ನಾರ್ತ್ ಸ್ಟ್ಯಾಂಡ್ಗೆ ತಮ್ಮ ಹೆಸರಿಡುವ ನಿರ್ಣಯ ಅಂಗೀಕರಿಸುವ ಮೂಲಕ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಆಗ ಅವರು ಅಧ್ಯಕ್ಷರಾಗಿ ಸುಮಾರು ಒಂದು ತಿಂಗಳಷ್ಟೇ ಆಗಿತ್ತು.

‘ಆದೇಶಕ್ಕೆ ತಡೆ ಕೋರಿ ನಾನು ತೆಲಂಗಾಣ ಹೈಕೋರ್ಟ್ಗೆ ಮೊರೆಹೋಗುವುದು ಖಚಿತ. ಭಾರತ ತಂಡದ ನಾಯಕನೊಬ್ಬನ ಹೆಸರನ್ನು ತೆಗೆದುಹಾಕಲು ಹೇಳಿರುವುದು ನಾಚಿಕೆಗೇಡು’ ಎಂದು ಅವರು ಭಾನುವಾರ ಅಸಮಾಧಾನ ವ್ಯಕ್ತಪಡಿಸಿದರು.

ಅಜರ್ 99 ಟೆಸ್ಟ್ಗಳನ್ನು ಆಡಿದ್ದು, 334 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.