ಐಸಿಸಿ ರ‍್ಯಾಂಕಿಂಗ್‌ | ಅಗ್ರಸ್ಥಾನದ ಸನಿಹ ರೋಹಿತ್‌

ಮಂಗಳವಾರ, ಜೂಲೈ 23, 2019
24 °C
ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕುವ ಹಾದಿಯಲ್ಲಿ ‘ಮುಂಬೈಕರ್‌’

ಐಸಿಸಿ ರ‍್ಯಾಂಕಿಂಗ್‌ | ಅಗ್ರಸ್ಥಾನದ ಸನಿಹ ರೋಹಿತ್‌

Published:
Updated:
Prajavani

ಲಂಡನ್‌: ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವತ್ತ ದಾಪುಗಾಲಿಟ್ಟಿದ್ದಾರೆ.

ವಿಶ್ವಕಪ್‌ ಟೂರ್ನಿಯಲ್ಲಿ ರನ್‌ ಹೊಳೆ ಹರಿಸಿರುವ ಅವರು ಸದ್ಯ ಎರಡನೇ ಸ್ಥಾನ ಹೊಂದಿದ್ದು, ಅಗ್ರಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕುವ ಸಾಧ್ಯತೆ ಇದೆ. ಅದಕ್ಕಾಗಿ  ಕೇವಲ ಏಳು ಪಾಯಿಂಟ್ಸ್‌ ಗಳಿಸಬೇಕಿದೆ.

ವಿಶ್ವಕಪ್‌ಗೂ ಮುನ್ನ ಕೊಹ್ಲಿ ಮತ್ತು ರೋಹಿತ್‌ ನಡುವೆ 51 ಪಾಯಿಂಟ್ಸ್‌ಗಳ ಅಂತರವಿತ್ತು. ಟೂರ್ನಿಯಲ್ಲಿ ರೋಹಿತ್‌ ಐದು ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಒಟ್ಟು 647 ರನ್‌ ಕಲೆಹಾಕಿ ರ‍್ಯಾಂಕಿಂಗ್‌ ಪಾಯಿಂಟ್ಸ್‌ ಹೆಚ್ಚಿಸಿಕೊಂಡಿದ್ದಾರೆ. ಕೊಹ್ಲಿ, ಈ ಸಲದ ವಿಶ್ವಕಪ್‌ನಲ್ಲಿ 63.14ರ ಸರಾಸರಿಯಲ್ಲಿ 441 ರನ್‌ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳೂ ಸೇರಿವೆ.‌ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ಅಗ್ರಸ್ಥಾನ ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.

ಅಗ್ರ ಸ್ಥಾನದಲ್ಲಿರುವ ಐವರು ಆಟಗಾರರು
1. ವಿರಾಟ್‌ ಕೊಹ್ಲಿ(ಭಾರತ) | ಪಾಯಿಂಟ್ಸ್‌: 891
2. ರೋಹಿತ್‌ ಶರ್ಮಾ(ಭಾರತ) | ಪಾಯಿಂಟ್ಸ್‌: 885
3. ಬಾಬರ್‌ ಆಜಂ(ಪಾಕಿಸ್ತಾನ | ಪಾಯಿಂಟ್ಸ್‌: 827
4. ಫಾಫ್‌ ಡು ಪ್ಲೆಸಿ(ದಕ್ಷಿಣ ಆಫ್ರಿಕಾ) | ಪಾಯಿಂಟ್ಸ್‌: 820
5. ರಾಸ್‌ ಟೇಲರ್‌(ನ್ಯೂಜಿಲೆಂಡ್‌) | ಪಾಯಿಂಟ್ಸ್‌: 813

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !