ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಸಿಸಿ ರ‍್ಯಾಂಕಿಂಗ್: ಆಲ್‌ರೌಂಡರ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ನಬಿ

ಐಸಿಸಿ ರ‍್ಯಾಂಕಿಂಗ್: ಟೆಸ್ಟ್‌ ಬೌಲರ್ ಪಟ್ಟಿಯಲ್ಲಿ ಬೂಮ್ರಾಗೆ ಅಗ್ರಸ್ಥಾನ
Published 14 ಫೆಬ್ರುವರಿ 2024, 13:11 IST
Last Updated 14 ಫೆಬ್ರುವರಿ 2024, 13:11 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಅಫ್ಗಾನಿಸ್ತಾನದ ಮೊಹಮ್ಮದ್ ನಬಿ ಅವರು ಐಸಿಸಿ ಆಲ್‌ರೌಂಡರ್‌ಗಳ ಏಕದಿನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದರು. ದೀರ್ಘಕಾಲ ಅಗ್ರಸ್ಥಾನದಲ್ಲಿದ್ದ ಶಕಿಬ್ ಅಲ್ ಹಸನ್ ಅವರನ್ನು ನಬಿ ಹಿಂದೆಹಾಕಿದರಲ್ಲದೇ, ಈ ಸ್ಥಾನಕ್ಕೇರಿದ ಅತಿ ಹಿರಿಯ ಕ್ರಿಕೆಟಿಗ ಎಂಬ ಗೌರವಕ್ಕೂ ಪಾತ್ರರಾದರು.

ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಗುರುವಾರ ಆರಂಭವಾಗಲಿರುವ ಮೂರನೇ ಟೆಸ್ಟ್‌ಗೆ ಪುನರಾಗಮನ ಮಾಡಲಿರುವ ರವೀಂದ್ರ ಜಡೇಜ ಅವರು ಟೆಸ್ಟ್‌ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ನಬಿ ಅವರ ವಯಸ್ಸು 39 ವರ್ಷ, ಒಂದು ತಿಂಗಳು. ಈ ಹಿಂದೆ ತಿಲಕರತ್ನೆ ದಿಲ್ಶಾನ್‌ (ಶ್ರೀಲಂಕಾ) ಅವರು 2015ರಲ್ಲಿ ಏಕದಿನ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾಗ ಅವರಿಗೆ 38 ವರ್ಷ, 8 ತಿಂಗಳು ಆಗಿತ್ತು. ಶಕಿಬ್ 1739 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು. ಅತಿ ದೀರ್ಘ ಅವಧಿಗೆ ಈ ಸ್ಥಾನ ಉಳಿಸಿದವರಲ್ಲಿ ಅವರು ಮೊದಲಿಗರು.

ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ ಅವರು ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT