ಬುಧವಾರ, ಮಾರ್ಚ್ 29, 2023
29 °C

T20 WC: ಬಾಬರ್, ರಿಜ್ವಾನ್ ಶತಕದ ಜೊತೆಯಾಟ; ನಮಿಬಿಯಾಕ್ಕೆ ಕಠಿಣ ಗುರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಅವರ ಅಬ್ಬರದ ಅರ್ಧಶತಕಗಳಿಂದಾಗಿ ಪಾಕಿಸ್ತಾನ ತಂಡವು ನಮಿಬಿಯಾಕ್ಕೆ ಕಠಿಣ ಗುರಿಯೊಡ್ಡಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್  ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ  ರಿಜ್ವಾನ್ (ಔಟಾಗದೆ 79; 50ಎಸೆತ, 8ಬೌಂಡರಿ, 4ಸಿಕ್ಸರ್‌) ಮತ್ತು ಬಾಬರ್ ಆಜಂ (70; 49ಎಸೆತ, 7ಬೌಂಡರಿ) ಮೊದಲ ವಿಕೆಟ್‌ಗೆ 113 ರನ್ ಪೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 189 ರನ್‌ ಗಳಿಸಿತು.

ಇದೇ ಮೊದಲ ಬಾರಿ ಟಿ20 ವಿಶ್ವಕಪ್‌ ಟೂರ್ನಿಯ ಪ್ರಮುಖ ಸುತ್ತಿನಲ್ಲಿ ನಮಿಬಿಯಾ ತಂಡವು ಆಡುತ್ತಿದೆ. ಟೂರ್ನಿಯಲ್ಲಿ ಪಾಕಿಸ್ತಾನವು ಈಗಾಗಲೇ ಭಾರತ, ನ್ಯೂಜಿಲೆಂಡ್ ಮತ್ತು ಅಫ್ಗಾನಿಸ್ತಾನ ತಂಡಗಳನ್ನು ಸೋಲಿಸಿದೆ.

ಅನುಭವದ ಕೊರತೆ ಇರುವ ನಮಿಬಿಯಾ ತಂಡದ ಬೌಲರ್‌ಗಳಿಗೆ 14 ಓವರ್‌ಗಳು ಮುಗಿಯುವವರೆಗೂ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಬಾಬರ್ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ರಿಜ್ವಾನ್  42 ಎಸೆತಗಳಲ್ಲಿ50ರ ಗಡಿ ದಾಟಿದರು. ರಿಜ್ವಾನ್ ಅರ್ಧಶತಕದಲ್ಲಿ ಮೂರು ಸಿಕ್ಸರ್‌ಗಳಿದ್ದವು.

ಆದರೆ, ಡೇವಿಸ್ ವೀಸ್ 15ನೇ ಓವರ್‌ನಲ್ಲಿ ಬಾಬರ್ ಆಜಂ ವಿಕೆಟ್‌ ಪಡೆದು ಜೊತೆಯಾಟವನ್ನು ಮುರಿದರು. ನಂತರದ ಓವರ್‌ನಲ್ಲಿ ಜಾನ್ ಫ್ರೈಲಿಂಕ್ ಬೌಲಿಂಗ್‌ನಲ್ಲಿ ಫಕರ್ ಜಮಾನ್ (5ರನ್) ಔಟಾದರು. ಕ್ರೀಸ್‌ಗೆ ಬಂದ ಮೊಹಮ್ಮದ್ ಹಫೀಜ್ (32; 16ಎಸೆತ, 5ಬೌಂಡರಿ) ರನ್‌ಗಳನ್ನು ಸೂರೆ ಮಾಡಿದರು. 18ನೇ ಓವರ್‌ನಲ್ಲಿ ತಮಗೆ ಲಭಿಸಿದ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡರು.‌

ಸಂಕ್ಷಿಪ್ತ ಸ್ಕೋರು
ಪಾಕಿಸ್ತಾನ:
20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 189 (ಮೊಹಮ್ಮದ್ ರಿಜ್ವಾನ್ ಔಟಾಗದೆ 79, ಬಾಬರ್ ಆಹಂ 70, ಮೊಹಮ್ಮದ್ ಹಫೀಜ್ ಔಟಾಗದೆ 32, ಡೇವಿಡ್ ವೀಸ್ 30ಕ್ಕೆ1, ಜಾನ್ ಫ್ರೈಲಿಂಕ್ 31ಕ್ಕೆ1) ವಿವರ ಅಪೂರ್ಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು