ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Womens T20 WC: ಇತಿಹಾಸದ ಹೊಸ್ತಿಲಲ್ಲಿ ದಕ್ಷಿಣ ಆಫ್ರಿಕಾ

ಮಹಿಳಾ ಟಿ20 ವಿಶ್ವಕಪ್ ಫೈನಲ್: 6ನೇ ಪ್ರಶಸ್ತಿ ಮೇಲೆ ಆಸ್ಟ್ರೇಲಿಯಾ ಕಣ್ಣು
Last Updated 25 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು ಹೊಸ ಇತಿಹಾಸ ರಚಿಸುವ ಛಲದಲ್ಲಿದ್ದಾರೆ.

ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್ ತಲುಪಿರುವ ತಂಡವು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಉತ್ಸಾಹದಲ್ಲಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಆತ್ಮವಿಶ್ವಾಸ ಸನಿ ಲುಸ್ ನಾಯಕತ್ವದ ಬಳಗಕ್ಕಿದೆ.

ದಕ್ಷಿಣ ಆಫ್ರಿಕಾ ತಂಡವೂ ಕಳೆದ ಒಂದು ವರ್ಷದಲ್ಲಿ ಬೆಳೆದಿರುವ ರೀತಿ ಗಮನಾರ್ಹ. ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೂ ತಂಡವು ಪ್ರವೇಶಿಸಿತ್ತು. ಪ್ರಸ್ತುತ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಸನಿಹ ಬಂದು ನಿಂತಿದೆ.

ತಂಡದಲ್ಲಿರುವ ಪ್ರಮುಖ ಆಟಗಾರ್ತಿಯರೂ ಉತ್ತಮ ಲಯದಲ್ಲಿದ್ದಾರೆ. ವಿಶ್ವ ಜೂನಿಯರ್ ಜಾವೆಲಿನ್ ಚಾಂಪಿಯನ್ ಲಾರಾ ವೊಲ್ವಾರ್ಡೆಟ್ ಮತ್ತು ತಜ್ಮೀನ್ ಬ್ರಿಟ್ಸ್‌ 11 ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದರು. ಅದರಿಂದಾಗಿ 2012ರ ಒಲಿಂಪಿಕ್ ಕೂಟದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದರು. ಅದರ ನಂತರ ಕ್ರಿಕೆಟ್‌ ಕಣದಲ್ಲಿ ಬಹಳಷ್ಟು ಪರಿಶ್ರಮದಿಂದ ಬೆಳೆದರು. ಇದೀಗ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಇವರಿಬ್ಬರೂ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಟೂರ್ನಿಯಲ್ಲಿ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಮಿಂಚಿದ್ದ ಆಲ್‌ರೌಂಡರ್ ಮೆರಿಝಾನೆ ಕ್ಯಾಪ್, ಬೌಲರ್‌ಗಳಾದ ಶಬ್ನಿಮ್ ಇಸ್ಮಾಯಿಲ್ ಹಾಗೂ ಅಯಾಬೊಂಗಾ ಕಾಕಾ ಅವರ ಮೇಲೆ ನಾಯಕ ಲುಸ್‌ಗೆ ಅಪಾರ ವಿಶ್ವಾಸವಿದೆ.

ಆದರೆ, ಮ್ಯಾಗ್ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡದ ಮುಂದೆ ಜಯಿಸುವುದು ಸುಲಭವಲ್ಲ. ನಾಲ್ಕರ ಘಟ್ಟದಲ್ಲಿ ಗೆಲುವಿನತ್ತ ಸಾಗಿದ್ದ ಭಾರತ ತಂಡದ ಎದುರು ಕೊನೆಯ ಹಂತದ ಓವರ್‌ಗಳಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತ್ತು. ಪಂದ್ಯದ ಯಾವುದೇ ಹಂತದಲ್ಲಿಯೂ ಒಂದು ಸಣ್ಣ ಅವಕಾಶ ಸಿಕ್ಕರೂ ಗೆಲುವು ಒಲಿಸಿಕೊಳ್ಳುವ ಕಲೆ ಆಸ್ಟ್ರೇಲಿಯಾ ಬಳಗಕ್ಕೆ ಕರಗತವಾಗಿದೆ. ಆದ್ದರಿಂದ ಆತಿಥೇಯ ಬಳಗವು ಎಚ್ಚರಿಕೆಯಿಂದ ಆಡಬೇಕಾದ ಸವಾಲು ಕೂಡ ಇದೆ.

ಪಂದ್ಯ ಆರಂಭ: ಸಂಜೆ 6.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT