ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರೋಫಿ ಯಾತ್ರೆ: ಬೆಂಗಳೂರಿಗೆ ಇಂದು ಮಹಿಳಾ ವಿಶ್ವಕಪ್

Published : 5 ಸೆಪ್ಟೆಂಬರ್ 2024, 20:38 IST
Last Updated : 5 ಸೆಪ್ಟೆಂಬರ್ 2024, 20:38 IST
ಫಾಲೋ ಮಾಡಿ
Comments

ದುಬೈ: ಮುಂದಿನ ತಿಂಗಳು ನಡೆಯಲಿರುವ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಟ್ರೋಫಿಯ ಯಾತ್ರೆಯು ಶುಕ್ರವಾರ ಬೆಂಗಳೂರಿಗೆ ಬರಲಿದೆ. 

ಉದ್ಯಾನನಗರಿಯಲ್ಲಿ ಮಹಿಳೆಯರ ಕ್ರಿಕೆಟ್‌ ತರಬೇತಿಯ ಪ್ರಮುಖ ತಾಣವಾಗಿರುವ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ಯಲ್ಲಿ ಪ್ರದರ್ಶನಗೊಳ್ಳಲಿದೆ. ಸೆ. 7ರಂದು ನೆಕ್ಸಸ್‌ ಮಾಲ್ ಮತ್ತು 8ರಂದು ಇನ್ಫಿನಿಟಿ ಮಾಲ್‌ನಲ್ಲಿ ಸಾರ್ವಜನಿಕರ ಪ್ರದರ್ಶನ ನಡೆಯಲಿದೆ. ಸೆ 14 ಮತ್ತು 15ರಂದು ಮುಂಬೈನ ಮಲಾಡ್‌ನಲ್ಲಿ ಕೂಡ ಪ್ರದರ್ಶನಗೊಳ್ಳಲಿದೆ. ಅದರ ನಂತರ ಶ್ರೀಲಂಕಾ, ಬಾಂಗ್ಲಾದೇಶಗಳಿಗೆ ತೆರಳಲಿದೆ. 

ಅದರ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಮರಳುವುದು. ಅ.3ರಿಂದ ಯುಎಇಯಲ್ಲಿ ನಡೆಯಲಿದೆ. ಬಾಂಗ್ಲಾ ಆತಿಥ್ಯ ವಹಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT