ಶಾರ್ಜಾ: ಸೋಫಿ ಎಕ್ಸೆಲ್ಸ್ಟೋನ್ ಅವರ ಉತ್ತಮ ಬೌಲಿಂಗ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅವರ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಜಯಿಸಿತು.

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 7 ವಿಕೆಟ್ಗಳಿಂದ ಜಯಿಸಿತು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕಿ ಲಾರಾ ವೊಲ್ವಾರ್ಟ್ (42; 39ಎ, 4X3) ಮತ್ತು ಮರಿಝಾನ್ ಕ್ಯಾಪ್ (26; 17ಎ, 4X3) ಅವರು ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ ಇವರಿಬ್ಬರ ವಿಕೆಟ್ ಕಬಳಿಸಿದ ಬೌಲರ್ ಸೋಫಿ ತಂಡದ ರನ್ಗಳಿಕೆಗೆ ಕಡಿವಾಣ ಹಾಕಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 124 ರನ್ಗಳ ಸಾಧಾರಣ ಮೊತ್ತ ಗಳಿಸಲು ಸಾಧ್ಯವಾಯಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 19.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ತಂಡದ ಆರಂಭಿಕ ಆಟಗಾರ್ತಿ ಡ್ಯಾನಿಲ್ ವೈಡ್ ಹಾಜ್ 43 (43ಎ) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ನ್ಯಾಟ್ ಸಿವರ್ ಬ್ರಂಟ್ (ಔಟಾಗದೆ 48) ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 124 (ಲಾರಾ ವೊಲ್ವಾರ್ಟ್ 42, ಮರಿಝಾನ್ ಕ್ಯಾಪ್ 26, ಎನೆರಿ ಡಾರ್ಕೆಸೆನ್ ಔಟಾಗದೆ 20, ಸೋಫಿ ಎಕ್ಸೆಲ್ಸ್ಟೋನ್ 15ಕ್ಕೆ2)

ಇಂಗ್ಲೆಂಡ್: 19.2 ಓವರ್ಗಳಲ್ಲಿ 3 ವಿಕೆಟ್ಗಳಿಗೆ 125 (ಡ್ಯಾನಿಲ್ ವೈಟ್ ಹಾಜ್ 43, ಅಲೈಸ್ ಕ್ಯಾಪ್ಸಿ 19, ನ್ಯಾಟ್ ಸಿವರ್ ಬ್ರಂಟ್ 48, ಮರಿಝಾನ್ ಕ್ಯಾಪ್ 17ಕ್ಕೆ1)

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್ಗಳ ಜಯ. ಪಂದ್ಯದ ಆಟಗಾರ್ತಿ: ಸೋಫಿ ಎಕ್ಸೆಲ್ಸ್ಟೋನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.