ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SA vs BAN: ದಕ್ಷಿಣ ಆಫ್ರಿಕಾಗೆ ಬಾಂಗ್ಲಾದೇಶ ವಿರುದ್ಧ 149 ರನ್‌ ಗೆಲುವು

Published 24 ಅಕ್ಟೋಬರ್ 2023, 16:54 IST
Last Updated 24 ಅಕ್ಟೋಬರ್ 2023, 16:54 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 149 ರನ್‌ಗಳಿಂದ ಭಾರಿ ಜಯವನ್ನು ದಾಖಲಿಸಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ರನ್‌ಗಳ ಪ್ರವಾಹವನ್ನೇ ಹರಿಸುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿ, 382 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದಕೊಂಡು ಇಷ್ಟು ರನ್‌ ಗಳಿಸಿತು.

ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ ಪೇರಿಸಲು ಸಾಧ್ಯವಾಯಿತು. ಕ್ವಿಂಟನ್ ಡಿಕಾಕ್ 174, ಏಡನ್ ಮರ್ಕರಂ 60, ಹೆನ್ರಿಚ್ ಕ್ಲಾಸೆನ್ 90 ರನ್‌ ಬಾರಿಸಿದರು.

ಬಾಂಗ್ಲಾ ಪರ ಹಸನ್ ಮೆಹಮೂದ್ 2 ವಿಕೆಟ್‌ ಪಡೆದರೆ, ಶೊರಿಫುಲ್ ಇಸ್ಲಾಂ, ಮೆಹದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್ ತಲಾ ಒಂದು ವಿಕೆಟ್‌ ಪಡೆದರು.

ಈ ಬೃಹತ್ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಕಳಪೆ ಆರಂಭ ಪಡೆಯಿತು. 30 ರನ್‌ಗಳಿಗೆ ಮೊದಲ ವಿಕೆಟ್ ಬಿತ್ತು. 85 ರನ್‌ ಆಗುವ ವೇಳೆಗೆ ಬಾಂಗ್ಲಾದೇಶದ ಅರ್ಧ ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದ್ದರು.

ಮಧ್ಯಮ ಕ್ರಮಾಂಕದ ಬ್ಯಾಟರ್ ಮೊಹಮ್ಮದುಲ್ಲಾ 111 ಎಸೆತಗಳಲ್ಲಿ ಅಷ್ಟೇ ರನ್ ಬಾರಿಸುವ ಮೂಲಕ ಸೋಲಿನ ಅಂತರವನ್ನು ತಗ್ಗಿಸಿದರು. ಆರಂಭಿಕ ಲಿಟನ್ ದಾಸ್‌ 44 ಎಸೆತಗಳಲ್ಲಿ 22 ರನ್‌ಗಳಿಸಿದ್ದೇ ಎರಡನೇ ಅತಿ ದೊಡ್ಡ ವೈಯಕ್ತಿಕ ಸ್ಕೋರ್.

ದಕ್ಷಿಣ ಆಫ್ರಿಕಾದ ವೇಗಿಗಳ ದಾಳಿಗೆ ಕುಸಿದ ಬಾಂಗ್ಲಾದೇಶವು 46.4 ಓವರ್‌ಗಳಲ್ಲಿ 233 ರನ್‌ಗಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡು ಸೋಲನುಭವಿಸಿತು.

ಗೆರಾಲ್ಡ್‌ ಕೋಡ್ಜೆ 3, ಮಾರ್ಕೊ ಜೆನ್ಸನ್‌, ಲಿಜಡ್ ವಿಲಿಯಮ್ಸ್ ಹಾಗೂ ಕಾಗಿಸೊ ರಬಾಡ ತಲಾ 2 ವಿಕೆಟ್ ಪಡೆದರು. ಕೇಶವ್‌ ಮಹರಾಜ್‌ಗೆ ಒಂದು ವಿಕೆಟ್ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT