ಶುಕ್ರವಾರ, ಏಪ್ರಿಲ್ 16, 2021
21 °C

ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು ಐಸ್‌ ಹಾಕಿ ಆಟಗಾರನ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೋ (ರಾಯಿಟರ್ಸ್‌): ರಷ್ಯಾದ ಜೂನಿಯರ್ ಐಎಸ್‌ ಹಾಕಿ ತಂಡದ ಆಟಗಾರ ತೈಮುರ್ ಫೈಜುಡಿನೊವ್ ತಲೆಗೆ ಪೆಟ್ಟು ಬಿದ್ದು ಮೃತಪಟ್ಟ ಘಟನೆ ಮಂಗಳವಾರ  ನಡೆದಿದೆ.

ಇಲ್ಲಿ ಆಯೋಜಿಸಲಾಗಿರುವ ರಷ್ಯಾ ಜೂನಿಯರ್ ಹಾಕಿ ಲೀಗ್ (ಎಂಎಚ್‌ಎಲ್‌) ನಲ್ಲಿ ಡೈನಮೊ ಸೇಂಟ್ ಪೀಟರ್ಸ್‌ಬರ್ಗ್ ತಂಡದ ಆಟಗಾರನಾಗಿದ್ದರು. ಹೋದ ಶುಕ್ರವಾರ ನಡೆದ ಪಂದ್ಯದಲ್ಲಿ ಅವರ ತಲೆಗೆ ಪಕ್ಕ್‌ ( ಐಸ್‌ ಹಾಕಿಯಲ್ಲಿ ಬಳಸಲಾಗುವ ಚೆಂಡಿನ ಬದಲು ಚಪ್ಪಟೆಯಾದ ರಬ್ಬರ್ ಸಲಕರಣೆ) ತಲೆಗೆ ಅಪ್ಪಳಿಸಿತ್ತು.  19 ವರ್ಷದ ತೈಮುರ್ ಕುಸಿದುಬಿದ್ದಿದ್ದರು. ಪಂದ್ಯ ನಡೆದ ಸ್ಥಳದಿಂದ 250 ಕಿ.ಮೀ ದೂರದ ಆಸ್ಪತ್ರೆಗೆ ಅವರನ್ನು ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿತ್ತು.  ಆದರೆ, ಮೂರು ದಿನಗಳ ನಂತರ ಮೃತಪಟ್ಟಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು