ಅಭ್ಯಾಸ ಪಂದ್ಯ: ಪೃಥ್ವಿ, ಗಿಲ್ ಡಕ್ ಔಟ್; ರಹಾನೆ ಶತಕ, ಪೂಜಾರ ಫಿಫ್ಟಿ

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳು ಆರಂಭವಾಗಲಿರುವ ಟೆಸ್ಟ್ ಸರಣಿಯ ಪೂರ್ವ ಸಿದ್ಧತೆಗಾಗಿ ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ 'ಎ' ತಂಡವು ನಾಯಕ ಅಜಿಂಕ್ಯ ರಹಾನೆ ಅಜೇಯ ಶತಕ (108*) ಹಾಗೂ ಚೇತೇಶ್ವರ ಪೂಜಾರ ಆಕರ್ಷಕ ಅರ್ಧಶತಕದ (54) ನೆರವಿನಿಂದ ನಿಗದಿತ 90 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿದೆ.
ಸಿಡ್ನಿಯ ಡ್ರಮೊಯ್ನ್ ಓವಲ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 'ಎ' ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಖಾತೆ ತೆರೆಯಲಾಗದೇ ಪೆವಿಲಿಯನ್ಗೆ ಮರಳಿದರು. ಹನುಮ ವಿಹಾರಿ (15) ಕೂಡಾ ಹೆಚ್ಚು ನಿಲ್ಲಲಾಗಲಿಲ್ಲ. ಈ ಮೂಲಕ ಟೆಸ್ಟ್ ಸರಣಿಗೂ ಮುನ್ನ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಲಾಗಲಿಲ್ಲ.
ಈ ಹಂತದಲ್ಲಿ ಜೊತೆಗೂಡಿದ ಚೇತೇಶ್ವರ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದರು. ಇವರಿಬ್ಬರು ನಾಲ್ಕನೇ ವಿಕೆಟ್ಗೆ 76 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಆಕರ್ಷಕ ಅರ್ಧಶತಕ ಸಾಧಿಸಿದ ಪೂಜಾರ 140 ಎಸೆತಗಳಲ್ಲಿ ಐದು ಬೌಂಡರಿಗಳಿಂದ 54 ರನ್ ಗಳಿಸಿದರು.
Pujara and Rahane are out in the middle for the post-lunch session with India 3-65 after electing to bat first
WATCH LIVE: https://t.co/bz6aBDzoh4 #AUSAvIND pic.twitter.com/OXPwj4zm52
— cricket.com.au (@cricketcomau) December 6, 2020
ಗಾಯದಿಂದ ಚೇತರಿಸಿಕೊಂಡ ಬಳಿಕ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಎದುರು ನೋಡುತ್ತಿರುವ ವೃದ್ಧಿಮಾನ್ ಸಹಾ (0) ನಿರಾಸೆ ಮೂಡಿಸಿದರು. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (5) ಸಹ ವೈಫಲ್ಯ ಅನುಭವಿಸಿದರು.
ಅತ್ತ ಸೊಗಸಾದ ಇನ್ನಿಂಗ್ಸ್ ಕಟ್ಟಿದ ರಹಾನೆ ಶತಕ ಸಾಧನೆ ಮಾಡಿದರು. 228 ಎಸೆತಗಳನ್ನು ಎದುರಿಸಿದ ರಹಾನೆ 16 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 108 ರನ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ಕುಲ್ದೀಪ್ ಯಾದವ್ (15) ಹಾಗೂ ಉಮೇಶ್ ಯಾದವ್ (24) ರನ್ ಗಳಿಸಿದರು.
"I could watch him bat all day"
Well @kokeeffe49, you might just get that chance today! Another fifty for Cheteshwar Pujara in his first hit of this Australian tour #AUSAvIND pic.twitter.com/kWPYZtyHaO
— cricket.com.au (@cricketcomau) December 6, 2020
ಆಸ್ಟ್ರೇಲಿಯಾ 'ಎ' ತಂಡದ ಪರ ಜೇಮ್ಸ್ ಪ್ಯಾಟಿನ್ಸನ್ ಮೂರು ಮೈಕಲ್ ನೆಸರ್ ಹಾಗೂ ನಾಯಕ ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್ ಪಟ್ಟಿ: (ಮೊದಲ ದಿನದಾಟದ ಅಂತ್ಯಕ್ಕೆ)
ಭಾರತ 'ಎ' 237/8 (ರಹಾನೆ 108*, ಪೂಜಾರ 54, ಪ್ಯಾಟಿನ್ಸನ್ 58/3)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.