ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs BAN 1ST Test: ಪೂಜಾರ– ಗಿಲ್‌ ಶತಕ, ಬಾಂಗ್ಲಾ ಗೆಲುವಿಗೆ 513 ರನ್ ಗುರಿ

Last Updated 16 ಡಿಸೆಂಬರ್ 2022, 10:32 IST
ಅಕ್ಷರ ಗಾತ್ರ

ಚತ್ತೋಗ್ರಾಮ್, ಬಾಂಗ್ಲಾದೇಶ: ಟೆಸ್ಟ್ ಪರಿಣತ ಬ್ಯಾಟರ್ ಚೇತೇಶ್ವರ್ ಪೂಜಾರ ಹಾಗೂ ಯುವ ಬ್ಯಾಟರ್ ಶುಭಮನ್ ಗಿಲ್ ಅವರ ಅಬ್ಬರದ ಶತಕದ ಬಲದಿಂದ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತ ಪೇರಿಸಿದೆ.

ಮೂರನೇ ದಿನವಾದ ಶುಕ್ರವಾರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ 61.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 258 ರನ್ ಗಳಿಸಿ ಡಿಕ್ಲೇರ್ಮಾಡಿಕೊಂಡಿದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಬಾಂಗ್ಲಾ ಗುರುವಾರ ಎರಡನೇ ದಿನದ ಅಂತ್ಯಕ್ಕೆ 44 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತ್ತು.

ಮೂರನೇ ದಿನದಾಟ ಆರಂಭಿಸಿದ ಮೆಹದಿ ಹಸನ್ ಮಿರಾಜ್ 25, ಇಬಾದತ್ ಹೊಸೈನ್ 17 ರನ್ ಗಳಿಸಿದರು. ಇದರೊಂದಿಗೆ ಬಾಂಗ್ಲಾ ಮೊದಲ ಇನ್ನಿಂಗ್ಸ್‌ನಲ್ಲಿ 55.5 ಓವರ್‌ಗಳಲ್ಲಿ 150 ರನ್ ಗಳಿಸಿ ಆಲೌಟ್‌ ಆಯಿತು.

254 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತದ ಪರ ಕೆ.ಎಲ್‌.ರಾಹುಲ್ 23, ಶುಭಮನ್ ಗಿಲ್ 110, ಪೂಜಾರ ಔಟಾಗದೆ 102, ವಿರಾಟ್ ಕೊಹ್ಲಿ ಔಟಾಗದೆ 19 ರನ್ ಗಳಿಸಿದರು.

ಟೀಮ್ ಇಂಡಿಯಾ, ಬಾಂಗ್ಲಾ ಗೆಲುವಿಗೆ 513 ರನ್ ಗುರಿ ನೀಡಿದೆ. ಸದ್ಯ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಬಾಂಗ್ಲಾ 8ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 22ರನ್ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT