ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND v BAN 2nd Test | ಮತ್ತೆ ಕುಸಿದ ಬಾಂಗ್ಲಾ; ಜಯದ ಹಾದಿಯಲ್ಲಿ ಭಾರತಕ್ಕೂ ಆಘಾತ

Last Updated 24 ಡಿಸೆಂಬರ್ 2022, 12:39 IST
ಅಕ್ಷರ ಗಾತ್ರ

ಮೀರ್‌ಪುರ್: ಭಾರತ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 87 ರನ್‌ಗಳ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾದೇಶ ತಂಡ ಮತ್ತೊಮ್ಮೆ ಸಾಧಾರಣ ಮೊತ್ತಕ್ಕೆ ಕುಸಿದಿದೆ. 145 ರನ್‌ಗಳ ಸಾಧಾರಣಗುರಿ ಬೆನ್ನತ್ತಿರುವ ಭಾರತ ತಂಡವೂ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಇಲ್ಲಿನ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ227 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ314 ರನ್‌ ಗಳಿಸಿ ಮುನ್ನಡೆ ಸಾಧಿಸಿತ್ತು. ಭಾರತ ಪರರಿಷಭ್‌ ಪಂತ್‌ (93) ಹಾಗೂ ಶ್ರೇಯಸ್‌ ಅಯ್ಯರ್‌ (87) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ್ದರು.

ಶುಕ್ರವಾರಮತ್ತೆ ಬ್ಯಾಟಿಂಗ್‌ಗೆ ಇಳಿದ ಆತಿಥೇಯ ತಂಡಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 7 ರನ್ ಗಳಿಸಿತ್ತು. ಮೂರನೇ ದಿನದಾಟದ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು, ಬಾಂಗ್ಲಾ ಬಳಗಕ್ಕೆ ಹಿನ್ನಡೆಯಾಯಿತು. ಆರಂಭಿಕ ಜಾಕಿರ್‌ ಹಸನ್‌ (51), ಮಧ್ಯಮ ಕ್ರಮಾಂಕದ ಲಿಟನ್‌ ದಾಸ್‌ (73), ಕೆಳಕ್ರಮಾಂಕದಲ್ಲಿ ವಿಕೆಟ್‌ಕೀಪರ್‌–ಬ್ಯಾಟರ್‌ ನಾಸಿರ್‌ ಹಸನ್‌ (31) ಮತ್ತು ತಷ್ಕಿನ್‌ ಅಹಮದ್‌ (ಅಜೇಯ31) ಮಾತ್ರವೇಅಲ್ಪ ಪ್ರತಿರೋಧ ತೋರಿದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿ ಬರಲಿಲ್ಲ.

ಸಂಘಟಿತ ಪ್ರದರ್ಶನ ತೋರಿದ ಭಾರತದ ಬೌಲರ್‌ಗಳು ಬಾಂಗ್ಲಾ ಪಡೆಯನ್ನು 231ಕ್ಕೆ ಆಲೌಟ್‌ ಮಾಡಿದರು. ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಮೂರು ವಿಕೆಟ್‌ ಪಡೆದರೆ, ಆರ್‌.ಅಶ್ವಿನ್‌ ಮತ್ತು ಮೊಹಮ್ಮದ್ ಸಿರಾಜ್‌ ತಲಾ ಎರಡು ವಿಕೆಟ್‌ ಪಡೆದರು. ಉಮೇಶ್‌ ಯಾದವ್‌ ಮತ್ತು ಜೈದೇವ್ ಉನದ್ಕತ್ ಒಂದೊಂದು ವಿಕೆಟ್ ಹಂಚಿಕೊಂಡರು.

ಬಾಂಗ್ಲಾ ತಿರುಗೇಟು
ಸುಲಭ ಜಯದ ಲೆಕ್ಕಾಚಾರ ಹಾಗೂಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಯೋಜನೆಯಲ್ಲಿಗುರಿ ಬೆನ್ನತ್ತಿದಭಾರತಕ್ಕೆ ಬಾಂಗ್ಲಾ ಬೌಲರ್‌ಗಳು ತಿರುಗೇಟು ನೀಡಿದ್ದಾರೆ. ಟೀಂ ಇಂಡಿಯಾದಮೊತ್ತ 45 ರನ್‌ ಆಗುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಕಾಡಿದ್ದಾರೆ.

ನಾಯಕ ಕೆ.ಎಲ್‌.ರಾಹುಲ್‌ (2),ಶುಭಮನ್‌ ಗಿಲ್ (7)ಅನುಭವಿ ಚೇತೇಶ್ವರ್‌ ಪೂಜಾರಾ (6), ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ (1)ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಮೆಹದಿ ಹಸನ್‌ ಮಿರಾಜ್‌ ಮೂರು ವಿಕೆಟ್‌ ಮತ್ತು ನಾಯಕ ಶಕೀಬ್‌ ಅಲ್‌ ಹಸನ್‌ ಒಂದು ವಿಕೆಟ್‌ ಉರುಳಿಸಿ ಮಿಂಚಿದ್ದಾರೆ.

ಸದ್ಯ ಮೂರು ದಿನಗಳ ಆಟ ಮುಕ್ತಾಯವಾಗಿದ್ದು,ಭಾರತ ಗೆಲ್ಲಲು ಉಳಿದಿರುವ 6 ವಿಕೆಟ್‌ಗಳಿಂದ ಇನ್ನೂ 100 ರನ್ ಗಳಿಸಬೇಕಿದೆ.

54 ಎಸೆತಗಳಲ್ಲಿ26 ರನ್‌ ಗಳಿಸಿರುವ ಅಕ್ಷರ್ ಪಟೇಲ್‌ ಮತ್ತು ನೈಟ್‌ ವಾಚ್‌ಮನ್‌ ಜೈದೇವ್ ಉನದ್ಕತ್(3) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT