ಶನಿವಾರ, ಮೇ 28, 2022
31 °C

Ashwin Century: ಒಂದೇ ಟೆಸ್ಟ್‌ನಲ್ಲಿ ಶತಕ, 5 ವಿಕೆಟ್: 3 ಬಾರಿ ಅಶ್ವಿನ್ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

R Ashwin

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಅವರು ಆಕರ್ಷಕ ಶತಕ ಗಳಿಸಿದ್ದಾರೆ.

ಇದೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರು ಐದು ವಿಕೆಟ್‌ ಪಡೆದಿದ್ದಾರೆ. ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಹಾಗೂ ಶತಕದ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ, ಅಶ್ವಿನ್ ಅವರು ಮೂರನೇ ಬಾರಿಗೆ ಒಂದೇ ಟೆಸ್ಟ್‌ನಲ್ಲಿ ಶತಕ ಹಾಗೂ ಐದು ವಿಕೆಟ್ ಪಡೆದ ಸಾಧನೆ ಮಾಡಿದಂತಾಗಿದೆ.

ನೋಡಿ: PHOTOS | IND vs ENG, ಮೂರನೇ ದಿನದಾಟಕ್ಕೆ ಅಶ್ವಿನ್ ಶತಕದ ಮೆರುಗು

ಅಶ್ವಿನ್ ಅವರು ಈವರೆಗೆ ಒಟ್ಟು 5 ಶತಕ ಗಳಿಸಿದ್ದಾರೆ. ಆ ಪೈಕಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಾಲ್ಕು ಶತಕಗಳನ್ನು ದಾಖಲಿಸಿದ್ದಾರೆ.

ಅಶ್ವಿನ್ ಅವರು 148 ಎಸೆತಗಳಲ್ಲಿ 106 ರನ್ ಗಳಿಸಿದ್ದಾರೆ. ಇದರಲ್ಲಿ 14 ಬೌಂಡರಿ, 1 ಸಿಕ್ಸರ್ ಸೇರಿವೆ.

ಓದಿ: 

ಇಂಗ್ಲೆಂಡ್‌ನ ಮಾಜಿ ಆಟಗಾರ ಇಯಾನ್ ಬೋಥಮ್ ಅವರು ಒಂದೇ ಟೆಸ್ಟ್‌ನಲ್ಲಿ ಶತಕ ಹಾಗೂ ಐದು ವಿಕೆಟ್ ಪಡೆದ ಸಾಧನೆಯನ್ನು 5 ಬಾರಿ ಮಾಡಿದ್ದಾರೆ.

ಚಿದಂಬರಂ ಕ್ರೀಡಾಂಗಣದಲ್ಲಿ ಶತಕ ಗಳಿಸಿದ ತಮಿಳುನಾಡಿನ ಎರಡನೇ ಆಟಗಾರ ಎಂಬ ದಾಖಲೆಯೂ ಇಂದು ಅಶ್ವಿನ್ ಪಾಲಾಗಿದೆ. ಈ ಹಿಂದೆ ಕೃಷ್ಣಮಾಚಾರಿ ಶ್ರೀಕಾಂತ್ ಅವರು 1986/87ರಲ್ಲಿ ಪಾಕಿಸ್ತಾನದ ವಿರುದ್ಧ 123 ರನ್ ಗಳಿಸಿದ್ದರು.

ವೆಸ್ಟ್ ಇಂಡೀಸ್ ಹೊರತುಪಡಿಸಿ ಬೇರೊಂದು ತಂಡದ ವಿರುದ್ಧ ಅಶ್ವಿನ್ ಶತಕ ದಾಖಲಿಸಿರುವುದೂ ಇದೇ ಮೊದಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು