ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG Test: ಪ್ರೇಕ್ಷಕರನ್ನು ರಂಜಿಸಲು ಬೆನ್‌ ಸ್ಟೋಕ್ಸ್ ಮಾಡಿದ್ದೇನು?

Last Updated 15 ಫೆಬ್ರುವರಿ 2021, 9:33 IST
ಅಕ್ಷರ ಗಾತ್ರ

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ–ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಒದಗಿಸಿದೆ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್.ಅಶ್ವಿನ್ ಅವರ ಬ್ಯಾಟಿಂಗ್‌ ನಡುವೆ ಪ್ರೇಕ್ಷಕರಿಗೆ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ವಿಭಿನ್ನವಾಗಿ ಮನರಂಜನೆ ಒದಗಿಸಿದ್ದಾರೆ.

ಪಂದ್ಯದ ನಡುವೆ ತಲೆಕೆಳಗೆ, ಕಾಲುಮೇಲೆ ಮಾಡಿ (ಹ್ಯಾಂಡ್‌ಸ್ಟ್ಯಾಂಡ್‌) ಕೆಲ ಹೆಜ್ಜೆ ನಡೆಯುವ ಮೂಲಕ ಸ್ಟೋಕ್ಸ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಮೊದಲಿಗೆ ಸ್ಟೋಕ್ಸ್ ಅವರ ಹ್ಯಾಂಡ್‌ಸ್ಟ್ಯಾಂಡ್‌‌ನತ್ತ ಕ್ಯಾಮರಾಮನ್‌ಗಳು ಗಮನಹರಿಸಿರಲಿಲ್ಲ. ಆದರೆ, ಪ್ರೇಕ್ಷಕರ ಸಾಲಿನಿಂದ ಸಂಭ್ರಮದ ಕೇಕೆ ಕೇಳುತ್ತಿದ್ದಂತೆಯೇ ಕ್ಯಾಮರಾಗಳ ದೃಷ್ಟಿ ಅತ್ತ ವಾಲಿದವು. ನಂತರ ಸ್ಟೋಕ್ಸ್‌ ಅವರ ಹ್ಯಾಂಡ್‌ಸ್ಟ್ಯಾಂಡ್‌ ನಡಿಗೆಯ ನಿಧಾನಗತಿಯ ವಿಡಿಯೊ (slow-motion replay) ಮರುಪ್ರಸಾರ ಮಾಡಲಾಯಿತು.

ಸ್ಟೋಕ್ಸ್‌ ಸ್ಟಂಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ಸದ್ದುಮಾಡತೊಡಗಿದೆ. ಟ್ವಿಟರ್‌ನಲ್ಲಿ ವಿಡಿಯೊ ತುಣುಕು ವೈರಲ್ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT