ಮೊಹಾಲಿ: ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್ ಕಳೆದುಕೊಂಡು 574 ರನ್ಗಳಿಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಅಜೇಯ 175 ರನ್ ಸಿಡಿಸಿದ ರವೀಂದ್ರ ಜಡೇಜಾ ಭಾರತ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಜಡೇಜಾ ಅವರ ಅಮೋಘ ಆಟದಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್ಗಳಿದ್ದವು.

ಶುಕ್ರವಾರದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು 6 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿತ್ತು. ನಿನ್ನೆ 46 ರನ್ ಸಿಡಿಸಿದ್ದ ಜಡೇಜಾ ಇಂದು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಂಡದ ಸ್ಕೋರ್ ಹೆಚ್ಚಿಸುವ ಜೊತೆಗೆ ತಮ್ಮ ಜೀವನ ಶ್ರೇಷ್ಠ ಆಟದ ಮೂಲಕ ಗಮನ ಸೆಳೆದರು. ಜಡೇಜಾಗೆ ಉತ್ತಮ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್(61) ಅರ್ಧ ಶತಕ ಸಿಡಿಸಿದರು. ನಿನ್ನೆ ರಿಷಬ್ ಪಂತ್ 96 ರನ್ಗೆ ಔಟ್ ಆಗುವ ಮೂಲಕ ಶತಕ ವಂಚಿತರಾಗಿದ್ದರು.

ಭಾರತದ ಸವಾಲಿನ ಮೊತ್ತಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ
ಮೊದಲ ಇನಿಂಗ್ಸ್: 574/8 ಡಿಕ್ಲೇರ್
ರವೀಂದ್ರ ಜಡೇಜಾ: ಅಜೇಯ 175
ರಿಷಭ್ ಪಂತ್: 96
ರವಿಚಂದ್ರನ್ ಅಶ್ವಿನ್: 61
ಹನುಮ ವಿಹಾರಿ: 58

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.