ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿಗೆ 100ನೇ ಟೆಸ್ಟ್‌ ಪಂದ್ಯ: ಟಾಸ್‌ ಗೆದ್ದ ಭಾರತ, ಬ್ಯಾಟಿಂಗ್‌ ಆಯ್ಕೆ

Last Updated 4 ಮಾರ್ಚ್ 2022, 4:39 IST
ಅಕ್ಷರ ಗಾತ್ರ

ಮೊಹಾಲಿ: ವಿರಾಟ್‌ ಕೊಹ್ಲಿಯ 100ನೇ ಟೆಸ್ಟ್‌ ಪಂದ್ಯದ ಮೈಲುಗಲ್ಲಾಗಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್‌ ಮೂಲಕ ಗೆದ್ದಿರುವ ಭಾರತ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಅಧಿಪತ್ಯ ಸಾಧಿಸುವ ಹುಮ್ಮಸ್ಸಿನಿಂದ ಕಣಕ್ಕಿಳಿದಿದೆ.

ಮಯಂಕ್‌ ಅಗರವಾಲ್‌ ಮತ್ತು ರೋಹಿತ್‌ ಶರ್ಮಾ ಆರಂಭಿಕ ಬ್ಯಾಟರ್‌ಗಳಾಗಿ ಕ್ರೀಸ್‌ಗೆ ಇಳಿದಿದ್ದಾರೆ. ಯಾವುದೇ ವಿಕೆಟ್‌ ನಷ್ಟವಿಲ್ಲದೆ 5 ಓವರ್‌ಗೆ 23 ರನ್‌ ಗಳಿಸಿ ಆಡುತ್ತಿದ್ದಾರೆ.

ಸ್ಕೋರ್‌ ವಿವರ: 40/0
ಮಯಂಕ್‌ ಅಗರವಾಲ್‌: 19*(29)
ರೋಹಿತ್‌ ಶರ್ಮಾ: 19*(18)

'ನಾವು ಮೊದಲು ಬ್ಯಾಟ್‌ ಮಾಡಲಿದ್ದೇವೆ. ಇದು ನಮಗೆ ವಿಶೇಷ ಪಂದ್ಯ. ಎಲ್ಲರಿಗೂ 100 ಟೆಸ್ಟ್‌ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ವಿರಾಟ್‌ ಇಂತಹದ್ದೊಂದು ಮೈಲುಗಲ್ಲನ್ನು ಸ್ಥಾಪಿಸಲಿದ್ದಾರೆ' ಎಂದು ನಾಯಕ ರೋಹಿತ್‌ ಶರ್ಮಾ ಹೇಳಿದರು.

‘ವಿರಾಟ್ ಮಾಡಿರುವ ಶ್ರೇಷ್ಠ ಕೆಲಸವನ್ನು ಮುಂದುವರಿಸುವ ಪ್ರಯತ್ನ ನನ್ನದು. ಉತ್ತಮ ಆಟಗಾರರನ್ನು ಗುರುತಿಸಿ ತಂಡವನ್ನು ಕಣಕ್ಕಿಳಿಸುವುದೇ ಮುಖ್ಯ ಕೆಲಸ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಶ್ರೇಯಾಂಕದಲ್ಲಿ ನಾವಿನ್ನೂ ಅಗ್ರಸ್ಥಾನದಲ್ಲಿಲ್ಲ. ಮುಂಬರುವ ಸರಣಿಗಳಲ್ಲಿ ಈ ಸಾಧನೆ ಮಾಡುವ ವಿಶ್ವಾಸವಿದೆ‘ ಎಂದರು.

ಟೆಸ್ಟ್ ಕ್ರಿಕೆಟ್‌ ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ರಲ್ಲಿ ಒಬ್ಬರಾಗಿರುವ ವಿರಾಟ್ ಹೋದ ತಿಂಗಳು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ನಂತರ ನಾಯಕತ್ವ ಬಿಟ್ಟುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT