ಸೋಮವಾರ, ಫೆಬ್ರವರಿ 17, 2020
30 °C

ಕ್ರಿಕೆಟ್‌: ಬಾಂಗ್ಲಾದೇಶಕ್ಕೆ ಮಣಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಸಾವರ್‌, ಬಾಂಗ್ಲಾದೇಶ: ಸೌಮ್ಯ ಸರ್ಕಾರ್‌ (73; 68ಎ, 7ಬೌಂ, 3ಸಿ) ಮತ್ತು ನಾಯಕ ನಜಮುಲ್‌ ಹುಸೇನ್‌ ಶಾಂಟೊ (94; 88ಎ, 14ಬೌಂ, 2ಸಿ) ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾದೇಶ ತಂಡವು  ಎಮರ್ಜಿಂಗ್‌ ಟೀಮ್ಸ್‌ ಏಷ್ಯಾಕಪ್‌ 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಭಾರತವನ್ನು ಮಣಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಅರ್ಮಾನ್‌ ಜಾಫರ್ (105; 98ಎ, 8ಬೌಂ, 3ಸಿ) ಅವರ ಆಕರ್ಷಕ ಶತಕದ ಬಲದಿಂದ 50 ಓವರ್‌ಗಳಲ್ಲಿ 246ರನ್‌ ಕಲೆಹಾಕಿತು.

ಬಾಂಗ್ಲಾ ತಂಡ 42.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು. ಇತ್ತೀಚೆಗೆ ನಡೆದಿದ್ದ ಭಾರತ ಸೀನಿಯರ್‌ ತಂಡದ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ ಆಡಿದ್ದ ಸೌಮ್ಯ ಸರ್ಕಾರ್‌ ಮತ್ತು ನಜಮುಲ್‌ ಅವರು ಭಾರತದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ; 50 ಓವರ್‌ಗಳಲ್ಲಿ 246 (ಬಿ.ಆರ್‌.ಶರತ್‌ 12, ಆರ್ಯನ್‌ ಜುಯಲ್‌ 37, ಸನ್ವೀರ್‌ ಸಿಂಗ್‌ 26, ಅರ್ಮಾನ್‌ ಜಾಫರ್‌ 105, ವಿನಾಯಕ ಗುಪ್ತಾ 40; ಸುಮೊನ್‌ ಖಾನ್‌ 64ಕ್ಕೆ4, ತನ್ವೀರ್‌ ಇಸ್ಲಾಂ 38ಕ್ಕೆ2, ಸೌಮ್ಯ ಸರ್ಕಾರ್‌ 53ಕ್ಕೆ2).

ಬಾಂಗ್ಲಾದೇಶ: 42.1 ಓವರ್‌ಗಳಲ್ಲಿ 4 ವಿಕೆಟ್‌ಗೆ 250 (ಮೊಹಮ್ಮದ್‌ ನಯೀಮ್‌ 14, ಸೌಮ್ಯ ಸರ್ಕಾರ್‌ 73, ನಜಮುಲ್‌ ಶಾಂಟೊ 94, ಅಫಿಫ್‌ ಹುಸೇನ್‌ ಔಟಾಗದೆ 34; ಸೌರಭ್‌ ದುಬೆ 44ಕ್ಕೆ1, ಯಶ್‌ ರಾಥೋಡ್‌ 16ಕ್ಕೆ1, ಸನ್ವೀರ್‌ ಸಿಂಗ್‌ 42ಕ್ಕೆ1, ಸಿದ್ದಾರ್ಥ್‌ ದೇಸಾಯಿ 49ಕ್ಕೆ1). ಫಲಿತಾಂಶ: ಬಾಂಗ್ಲಾದೇಶಕ್ಕೆ 6 ವಿಕೆಟ್‌ ಗೆಲುವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು