ಶುಕ್ರವಾರ, ಸೆಪ್ಟೆಂಬರ್ 30, 2022
25 °C
ಕ್ರಿಕೆಟ್: ಗೌರವಯುತ ಮೊತ್ತ ಗಳಿಸಿದ ಭಾರತ ’ಎ’; ಫಿಷರ್‌ಗೆ ನಾಲ್ಕು ವಿಕೆಟ್

ಋತುರಾಜ್ ಗಾಯಕವಾಡ ಶತಕ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಋತುರಾಜ್ ಗಾಯಕವಾಡ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಎ ತಂಡದ ವಿರುದ್ದದ ‘ಟೆಸ್ಟ್‌’ನಲ್ಲಿ ಸುಂದರ ಶತಕ ದಾಖಲಿಸಿದರು.

ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯ ಬ್ಯಾಟರ್‌ಗಳು ಹಾಗೂ ಪ್ರವಾಸಿ ಬಳಗದ ಬೌಲರ್‌ಗಳಿಗೆ ಉದ್ಯಾನನಗರಿಯ ಅಂಗಳ ಸಮಾನ ನ್ಯಾಯ ಒದಗಿಸಿತು. ಭಾರತ ಎ ತಂಡವು 86.4 ಓವರ್‌ಗಳಲ್ಲಿ 293 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕಿವೀಸ್ ಬಳಗದ ಮ್ಯಾಥ್ಯೂ ಫಿಷರ್ ನಾಲ್ಕು ವಿಕೆಟ್ ಗಳಿಸಿದರು. 

ಭಾರತ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ವಿಕೆಟ್ ಗಳಿಸಿದ ಫಿಷರ್ ಆರಂಭಿಕ ಪೆಟ್ಟು ಕೊಟ್ಟರು. ಊಟದ ವಿರಾಮಕ್ಕೆ 66 ರನ್‌ಗಳಿಗೆ ಎರಡು ವಿಕೆಟ್‌ಗಳು ಪತನವಾಗಿದ್ದವು. 

ಈ ಹಂತದಲ್ಲಿ ಕ್ರೀಸ್‌ಗೆ ಬಂದ ಋತುರಾಜ್ (108; 127ಎಸೆತ, 4X12, 6X2) ಆತ್ಮವಿಶ್ವಾಸಭರಿತ ಆಟವಾಡಿದರು. ಆದರೆ ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಪತನವಾದವು. ಇದರಿಂದಾಗಿ 111 ರನ್ ಮೊತ್ತಕ್ಕೆ ನಾಲ್ಕು ವಿಕೆಟ್‌ಗಳು ಪತನಾದವು. ಈ ಸಂದರ್ಭದಲ್ಲಿ ಋತುರಾಜ್ ಜೊತೆಗೂಡಿದ ಉಪೇಂದ್ರ ಯಾದವ್ (76; 134ಎ, 4X9, 6X2) ಐದನೇ ವಿಕೆಟ್ ಜೊತೆಯಾಟದಲ್ಲಿ  134 ರನ್‌ ಸೇರಿಸಿ ಇನಿಂಗ್ಸ್‌ಗೆ ಬಲ ತುಂಬಿದರು.

ಚೆಂದದ ಡ್ರೈವ್, ಸ್ವೀಪ್‌ಗಳ ಆಟವಾಡಿದ ಋತುರಾಜ್ ಬೌಲರ್‌ಗಳಿಗೆ ಸವಾಲೊಡ್ಡಿದರು. ಅವರು ಎತ್ತಿದ ಎರಡು ಸಿಕ್ಸರ್‌ಗಳಿಗೆ ಚೆಂಡು ಖಾಲಿ ಗ್ಯಾಲರಿಗೆ ಹೋಗಿ ಬಿತ್ತು.

ಆದರೆ, ಛಲದ ಆಟವಾಡಿದ ಪ್ರವಾಸಿ ಬಳಗವೂ ದಿನದ ಕೊನೆಯಲ್ಲಿ ಪ್ರಿಯಾಂಕ್ ಪಾಂಚಾಲ್ ಬಳಗವು 300ರ ಗಡಿ ದಾಟದಂತೆ ನೋಡಿಕೊಂಡಿತು.

ಸಂಕ್ಷಿಪ್ತ ಸ್ಕೋರು: ಭಾರತ ಎ: 86.4 ಓವರ್‌ಗಳಲ್ಲಿ 293 (ಅಭಿಮನ್ಯು ಈಶ್ವರನ್ 38, ಋತುರಾಜ್ ಗಾಯಕವಾಡ 108, ರಜತ್ ಪಾಟೀದಾರ್ 30, ಉಪೇಂದ್ರ ಯಾದವ್ 76, ಜೇಕಬ್ ಡಫಿ 56ಕ್ಕೆ2, ಸೀನ್ ಸೊಲಿಯಾ 47ಕ್ಕೆ1, ಮ್ಯಾಥ್ಯೂ ಫಿಷರ್ 52ಕ್ಕ4)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು