ಗೆಳತಿ ಅಂಜುಮ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿವಂ ದುಬೆ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಿವಂ ದುಬೆ ಶುಕ್ರವಾರ ಗೆಳತಿ ಅಂಜುಮ್ ಖಾನ್ ಅವರನ್ನು ವಿವಾಹವಾದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ದುಬೆ, ತಮ್ಮ ವಿವಾಹ ಸಮಾರಂಭದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
‘ನಾವು ಪ್ರೀತಿಗಿಂತ ಹೆಚ್ಚಿನ ಪ್ರೀತಿಯಿಂದ ಪ್ರೀತಿಸಿದ್ದೇವೆ’ ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ‘ಈಗ ನಮ್ಮ ಶಾಶ್ವತ ಜೀವನ ಪ್ರಾರಂಭವಾಗುವ ಸ್ಥಳ ಇದು.’ಎಂದು ಬರೆದುಕೊಂಡಿದ್ದಾರೆ.
ಸಹ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ಸಿದ್ಧೇಶ್ ಲಾಡ್ ಮತ್ತು ಪ್ರಿಯಾಂಕ್ ಪಾಂಚಲ್ ಅವರು ದುಬೆಗೆ ಶುಭಾಶಯ ತಿಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಟ್ವಿಟ್ಟರ್‌ನಲ್ಲಿ ನವವಿವಾಹಿತರನ್ನು ಅಭಿನಂದಿಸಿದೆ.
𝑩𝒂𝒅𝒉𝒂𝒊 𝒉𝒐. 💗 #RoyalsFamily | @IamShivamDube pic.twitter.com/P06aJz85sQ
— Rajasthan Royals (@rajasthanroyals) July 16, 2021
ಟೀಮ್ ಇಂಡಿಯಾದ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗಿ ದುಬೆ ಅವರು 2019 ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ಭಾರತದ ಪರ ಅವರು 13 ಟಿ 20 ಪಂದ್ಯಗಳನ್ನು ಆಡಿದ್ದು, ಒಂದು ಅರ್ಧಶತಕ ಸಿಡಿಸಿದ್ದಾರೆ. 30 ರನ್ ನೀಡಿ 3 ವಿಕೆಟ್ ಉರುಳಿಸಿದ್ದು ಟಿ20ಯಲ್ಲಿ ಅವರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.