ನವದೆಹಲಿ: ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ಎದುರಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಸೋತ ನಂತರ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಗಂಭೀರ್ ಅವರು ಈ ಹುದ್ದೆ ವಹಿಸಿಕೊಂಡ ನಂತರ ಭಾರತ 11 ಟೆಸ್ಟ್ ಪಂದ್ಯಗಳ ಪೈಕಿ ಏಳರಲ್ಲಿ ಸೋಲನುಭವಿಸಿದೆ.

ಆಯ್ಕೆ ವಿಷಯ, ಬೇಕಾದ ಸಹಾಯಕ ಸಿಬ್ಬಂದಿ ನೇಮಕ, ಪತ್ರಿಕಾಗೋಷ್ಠಿಯಲ್ಲಿ ನಡೆದುಕೊಳ್ಳುವ ರೀತಿಯಿಂದ 43 ವರ್ಷ ವಯಸ್ಸಿನ ಗಂಭೀರ್ ಅವರು ಕೆಲವು ವಲಯಗಳಿಂದ ಟೀಕೆಗೆ ಒಳಗಾಗುತ್ತಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತರಾಗಿದ್ದು, ಭಾರತ ಕ್ರಿಕೆಟ್ನಲ್ಲಿ ಈಗ ಪರಿವರ್ತನೆಯ ಗಾಳಿ ಬೀಸುತ್ತಿದೆ. ಆದರೆ ಈ ಘಟಾನುಘಟಿ ಆಟಗಾರರು ನಿವೃತ್ತಿ ನಿರ್ಧಾರಕ್ಕೆ ಬರುವಲ್ಲಿ ಗಂಭೀರ್ ಕೈವಾಡವೂ ಇದೆ ಎಂಬ ಮಾತುಗಳು ಕೇಳಿಬಂದಿವೆ.

ಗಿಲ್ ನೇತೃತ್ವದ ತಂಡ ಐದು ಟೆಸ್ಟ್ಗಳ ಸರಣಿಯ ಮೊದಲ ಪಂದ್ಯವನ್ನು ಐದು ವಿಕೆಟ್ಗಳಿಂದ ಸೋತಿತ್ತು. ಒಂದಾದ ಮೇಲೊಂದರಂತೆ ಸೋಲುಗಳು ಅವರ ಮೇಲಿನ ಒತ್ತಡ ಹೆಚ್ಚಿಸಿವೆ. ಎಜ್ಬಾಸ್ಟನ್ನಲ್ಲಿ ಎರಡನೇ ಟೆಸ್ಟ್ ಆರಂಭಕ್ಕೆ ಮೊದಲೇ ಅವರು ಒತ್ತಡ ಅನುಭವಿಸುತ್ತಿದ್ದಾರೆ.

‘ಗೌತಮ್ ಗಂಭೀರ್ ಅವರ ಮೇಲೆ ಗಮನಾರ್ಹ ಒತ್ತಡವಿದೆ. ಈಗಿನ ಪರಿಸ್ಥಿತಿ ಅವರ ಮೇಲಿನ ಒತ್ತಡ ಹೆಚ್ಚಿಸುತ್ತಿದೆ’ ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ ಅವರು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ವಿಶ್ಲೇಷಿಸಿದ್ದಾರೆ.

‘ಬಾಂಗ್ಲಾದೇಶ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಮಾತ್ರ ಅವರು ಸಫಲರಾರು. ಆದರೆ ನ್ಯೂಜಿಲೆಂಡ್ ಎದುರು ಮೂರು, ಆಸ್ಟ್ರೇಲಿಯಾ ಎದುರು ಮೂರು ಮತ್ತು ಇಂಗ್ಲೆಂಡ್ ಎದುರು ಒಂದು ಪಂದ್ಯ ಸೋತಿದ್ದಾರೆ. ಅವರು ಸೋಲುತ್ತಿದ್ದಾರೆ ಮತ್ತು ಸೋಲುತ್ತಲೇ ಇದ್ದಾರೆ’ ಎಂದಿದ್ದಾರೆ ಚೋಪ್ರಾ.

2024ರ ಜುಲೈನಲ್ಲಿ ರಾಹುಲ್ ದ್ರಾವಿಡ್ ಅವರ ಸ್ಥಾನದಲ್ಲಿ ಭಾರತದ ಕೋಚ್ ಆಗಿದ್ದರು. ಆದರೆ ನಂತರ ಭಾರತ ಹಿನ್ನಡೆ ಕಂಡಿದೆ. ಅದರಲ್ಲೂ ನ್ಯೂಜಿಲೆಂಡ್ ಎದುರು 0–3 ಅಂತರದಲ್ಲಿ ತವರಿನಲ್ಲೇ ಮುಖಭಂಗ ಅನುಭವಿಸಿತ್ತು. ಇದು 12 ವರ್ಷಗಳಲ್ಲಿ ಭಾರತ ತವರಿನಲ್ಲಿ ಅನುಭವಿಸಿದ ಮೊದಲ ಸರಣಿ ಸೋಲು.

ಇಂಗ್ಲೆಂಡ್ ಪ್ರವಾಸಕ್ಕೆ ಮಧ್ಯಮ ಸರದಿಯ ಆಟಗಾರ ಸರ್ಫರಾಜ್ ಖಾನ್ ಅವರನ್ನು ಕೈಬಿಟ್ಟಿದ್ದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಜೊತೆ ಗಂಭೀರ್ ಅವರೂ ಟೀಕೆಗೆ ಒಳಗಾಗಿದ್ದರು.

ಸರ್ಫರಾಜ್ 2024ರಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ಇಂಗ್ಲೆಂಡ್ ಎದುರು ಅಜೇಯ 68 ಮತ್ತು 56 ರನ್ ಗಳಿಸಿದ್ದರು. ಅವರ ಬದಲು ದೇಶೀಯ ಕ್ರಿಕೆಟ್ನಲ್ಲಿ ರನ್ಹೊಳಗೆ ಹರಿಸಿದ ಕರುಣ್ ನಾಯರ್ ಅವರಿಗೆ ಅವಕಾಶ ಮಾಡಿಕೊಡಲಾಯಿತು.

‘ಗಂಭೀರ್ ಅವರು ಮುಂಗೋಪಿ. ತಮಗೆ ತೋಚಿದಂತೆ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಅವರ ಟೀಕಾಕಾರರು ದೂರುತ್ತಾರೆ.

‘ತಂತ್ರಗಾರಿಕೆ ವಿಷಯದಲ್ಲಿ ಗೌತಿ (ಗಂಭೀರ್) ಅತ್ಯುತ್ತಮ ಕೋಚ್. ಆದರೆ ಅವರು ಆಟಗಾರರಿಂದ ಅತಿಯಾದುದನ್ನು ನಿರೀಕ್ಷಿಸುತ್ತಾರೆ. ನಾಯಕರಾಗಿ ಅವರು ಆಕ್ರಮಣಕಾರಿ ಮನೋಭಾವ ಹೊಂದಿದ್ದರು. ಆದರೆ ಕೋಚ್ ಆಗಿ ಹಾಗೆ ಇರುವಂತಿಲ್ಲ’ ಎಂದು ವಿಕೆಟ್ ಕೀಪರ್– ಬ್ಯಾಟರ್ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಟೆಸ್ಟ್ನ ಎರಡೂ ಇನಿಂಗ್ಸ್ಗಳಲ್ಲಿ ಪಂತ್ ಶತಕ ಬಾರಿಸಿದರೂ ಗಂಭೀರ್ ಮಾಧ್ಯಮಗೋಷ್ಠಿಯಲ್ಲಿ ಆ ಸಂಬಂಧದ ಪ್ರಶ್ನೆಗೆ ಒತ್ತು ನೀಡಿ ಮಾತನಾಡಲಿಲ್ಲ.

ಗಂಭೀರ್ ಅವರನ್ನು ಮಾಧ್ಯಮಗೋಷ್ಠಿಯಿಂದ ದೂರವಿಡಬೇಕು ಎಂದು ಎರಡು ತಿಂಗಳ ಹಿಂದೆ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್ ಹೇಳಿದ್ದರು.

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ ನಾಯಕನಿಗಿಂತ ಹೆಚ್ಚಾಗಿ ಹಿರಿಯ ಬ್ಯಾಟರ್ ಕೆ.ಎಲ್.ರಾಹುಲ್ ಮತ್ತು ಉಪ ನಾಯಕ ಪಂತ್ ಅವರೇ ಫೀಲ್ಡ್ ಪ್ಲೇಸಿಂಗ್ ಮಾಡುತ್ತಿದ್ದುದು ಕಂಡುಬಂತು.

ಪಂದ್ಯದ ಅಂತಿಮ ಓವರುಗಳು ಸಮೀಪಿಸುತ್ತಿರುವಂತೆ ಬೂಮ್ರಾ ಅವರನ್ನು ದಾಳಿಗಿಳಿಸುವ ಗಿಲ್ ಲೆಕ್ಕಾಚಾರವನ್ನು ಸ್ವತಃ ಅಗ್ರ ವೇಗಿಯೇ ತಿರಸ್ಕರಿಸಿದರು. ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದಿದ್ದ ಬೂಮ್ರಾ ಎರಡನೇ ಇನಿಂಗ್ಸ್ನಲ್ಲಿ ವಿಕೆಟ್ ಪಡೆದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.