ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ರ‍್ಯಾಂಕಿಂಗ್: ಮೂರು ಮಾದರಿಯಲ್ಲೂ ಭಾರತಕ್ಕೆ ಅಗ್ರಸ್ಥಾನ

Published 10 ಮಾರ್ಚ್ 2024, 14:45 IST
Last Updated 10 ಮಾರ್ಚ್ 2024, 14:45 IST
ಅಕ್ಷರ ಗಾತ್ರ

ದುಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಜಯಗಳಿಸಿದ ಭಾರತ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿಯೂ ಮೊದಲ ಸ್ಥಾನವನ್ನು ಅಲಂಕರಿಸಿದೆ. 

ಭಾನುವಾರ ಐಸಿಸಿಯು ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ  122 ರೇಟಿಂಗ್‌ ಪಾಯಿಂಟ್ಸ್‌ನೊಂದಿಗೆ ಪ್ರಥಮ ಸ್ಥಾನ ಗಳಿಸಿತು. ಆಸ್ಟ್ರೇಲಿಯಾ (117) ಎರಡನೇ ಸ್ಥಾನಕ್ಕಿಳಿಯಿತು. 

ಇಂಗ್ಲೆಂಡ್ (111), ನ್ಯೂಜಿಲೆಂಡ್ (101) ಮತ್ತು ದಕ್ಷಿಣ ಆಫ್ರಿಕಾ (99) ಕ್ರಮವಾಗಿ ಮೂರರಿಂದ ಐದನೇ ಸ್ಥಾನ ಪಡೆದಿವೆ.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 121 ರೇಟಿಂಗ್ ಪಾಯಿಂಟ್ಸ್‌ ಗಳಿಸಿರುವ ಭಾರತ ಪ್ರಥಮ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (118) ಎರಡನೇ ಸ್ಥಾನದಲ್ಲಿದೆ. 

ಟಿ20 ಮಾದರಿಯಲ್ಲಿ ಭಾರತ ತಂಡವು 266 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮೊದಲ ಹಾಗೂ ಇಂಗ್ಲೆಂಡ್ (256) ಎರಡನೇ ಸ್ಥಾನದಲ್ಲಿದೆ. 

2023ರ ಸೆಪ್ಟೆಂಬರ್‌ನಿಂದ ಜನವರಿ 2024ರವರೆಗೂ ಭಾರತ ತಂಡವು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಭಾರತವು ಅಗ್ರಸ್ಥಾನದಲ್ಲಿತ್ತು.  ದಕ್ಷಿಣ ಆಫ್ರಿಕಾದಲ್ಲಿ ನಡೆದ ಸರಣಿ ಡ್ರಾ ಆದಾಗ ಕೆಳಗಿಳಿದಿತ್ತು. ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿತ್ತು. 

ಇದೀಗ ಇಂಗ್ಲೆಂಡ್ ಎದುರು ಭಾರತ ತಂಡವು 4–1ರಿಂದ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರಿದೆ.  ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ರ‍್ಯಾಂಕಿಂಗ್‌ನಲ್ಲಿಯೂ ಮೊದಲ ಸ್ಥಾನ ಗಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT