ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ ಇಲೆವನ್‌ ಎದುರಿನ ಅಭ್ಯಾಸ ಪಂದ್ಯ: ಶಮಿ, ಬೂಮ್ರಾ ಬಿರುಗಾಳಿ

Last Updated 15 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌: ಮೊಹಮ್ಮದ್‌ ಶಮಿ (17ಕ್ಕೆ3) ಮತ್ತು ಜಸ್‌ಪ್ರೀತ್‌ ಬೂಮ್ರಾ (18ಕ್ಕೆ2) ಅವರ ಬಿರುಗಾಳಿ ವೇಗದ ದಾಳಿಗೆ ನ್ಯೂಜಿಲೆಂಡ್‌ ಇಲೆವನ್‌ ತಂಡದ ಬ್ಯಾಟ್ಸ್‌ಮನ್‌ಗಳು ತಬ್ಬಿಬ್ಬಾದರು.

ಇವರ ಅಮೋಘ ಬೌಲಿಂಗ್‌ ಬಲದಿಂದ ಭಾರತ ತಂಡ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಗಳಿಸಿತು.

ಸೆಡನ್‌ ಪಾರ್ಕ್‌ನಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 78.5 ಓವರ್‌ಗಳಲ್ಲಿ 263ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್‌ ಇಲೆವನ್‌ ಎರಡನೇ ದಿನದಾಟದಲ್ಲಿ 74.2 ಓವರ್‌ಗಳಲ್ಲಿ 235ರನ್‌ಗಳಿಗೆ ಆಲೌಟ್‌ ಆಯಿತು.

28ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಭಾರತ ತಂಡ ದಿನದಾಟದ ಅಂತ್ಯಕ್ಕೆ 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 59ರನ್‌ ಕಲೆಹಾಕಿದೆ. ಹೀಗಾಗಿ ಪ್ರವಾಸಿ ಪಡೆಯ ಮುನ್ನಡೆ 87ಕ್ಕೆ ಹೆಚ್ಚಿದೆ.

ಮೊದಲ ಇನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದ ಮಯಂಕ್‌ ಅಗರವಾಲ್ (ಬ್ಯಾಟಿಂಗ್‌ 23; 17ಎ, 4ಬೌಂ, 1ಸಿ) ಮತ್ತು ಪೃಥ್ವಿ ಶಾ (ಬ್ಯಾಟಿಂಗ್‌ 35; 25ಎ, 5ಬೌಂ, 1ಸಿ) ತಂಡಕ್ಕೆ ಅಬ್ಬರದ ಆರಂಭ ನೀಡಿದರು.

ಈ ಜೋಡಿ ಟ್ವೆಂಟಿ–20 ಪಂದ್ಯವನ್ನು ನೆನಪಿಸುವಂತೆ ಬ್ಯಾಟಿಂಗ್‌ ಮಾಡಿತು.

ಆರಂಭಿಕ ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಡೆರಿಲ್‌ ಮಿಚೆಲ್‌ ಸಾರಥ್ಯದ ನ್ಯೂಜಿಲೆಂಡ್‌ ಇಲೆವನ್‌ಗೆ ಮೂರನೇ ಓವರ್‌ನಲ್ಲೇ ಆಘಾತ ಎದುರಾಯಿತು. ಬೂಮ್ರಾ ಹಾಕಿದ ಎರಡನೇ ಎಸೆತದಲ್ಲಿ ವಿಲ್‌ ಯಂಗ್‌ (2) ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ ಕ್ಯಾಚ್‌ ನೀಡಿದರು. ಇದರ ಬೆನ್ನಲ್ಲೇ ಟಿಮ್‌ ಸೀಫರ್ಟ್‌ (9; 26ಎ, 1ಬೌಂ) ಮೊಹಮ್ಮದ್‌ ಶಮಿಗೆ ವಿಕೆಟ್‌ ನೀಡಿದರು.

ರಚಿನ್‌ ರವೀಂದ್ರ (34; 67ಎ, 7ಬೌಂ) ಮತ್ತು ಫಿನ್‌ ಅಲೆನ್‌ (20; 55ಎ, 3ಬೌಂ) ಅವರನ್ನು ಕ್ರಮವಾಗಿ ಉಮೇಶ್‌ ಯಾದವ್‌ ಮತ್ತು ಬೂಮ್ರಾ ಪೆವಿಲಿಯನ್‌ಗೆ ಅಟ್ಟಿದಾಗ ಆತಿಥೇಯರ ಖಾತೆಯಲ್ಲಿ ಇದ್ದದ್ದು 82ರನ್‌ಗಳಷ್ಟೇ.

ಬಳಿಕ ಹೆನ್ರಿ ಕೂಪರ್‌ (40; 68ಎ, 6ಬೌಂ), ಟಾಮ್‌ ಬ್ರೂಸ್‌ (31; 34ಎ, 4ಬೌಂ) ಮತ್ತು ನಾಯಕ ಮಿಚೆಲ್‌ (32; 65ಎ, 5ಬೌಂ) ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ; ಮೊದಲ ಇನಿಂಗ್ಸ್‌: 78.5 ಓವರ್‌ಗಳಲ್ಲಿ 263 ಮತ್ತು 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 59 (ಪೃಥ್ವಿ ಶಾ ಬ್ಯಾಟಿಂಗ್‌ 35, ಮಯಂಕ್‌ ಅಗರವಾಲ್‌ ಬ್ಯಾಟಿಂಗ್‌ 23).

ನ್ಯೂಜಿಲೆಂಡ್‌ ಇಲೆವನ್‌: ಪ್ರಥಮ ಇನಿಂಗ್ಸ್‌; 74.2 ಓವರ್‌ಗಳಲ್ಲಿ 235 (ರಚಿನ್‌ ರವೀಂದ್ರ 34, ಫಿನ್ ಅಲೆನ್‌ 20, ಹೆನ್ರಿ ಕೂಪರ್‌ 40, ಟಾಮ್‌ ಬ್ರೂಸ್‌ 31, ಡೆರಿಲ್ ಮಿಚೆಲ್‌ 32, ಡೇನ್‌ ಕ್ಲೀವರ್‌ 13, ಈಶ್‌ ಸೋಧಿ 14; ಜಸ್‌ಪ್ರೀತ್‌ ಬೂಮ್ರಾ 18ಕ್ಕೆ2, ಉಮೇಶ್‌ ಯಾದವ್‌ 49ಕ್ಕೆ2, ಮೊಹಮ್ಮದ್‌ ಶಮಿ 17ಕ್ಕೆ3, ನವದೀಪ್‌ ಸೈನಿ 58ಕ್ಕೆ2, ಆರ್‌.ಅಶ್ವಿನ್‌ 46ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT