ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌: ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

ನ್ಯೂಜಿಲೆಂಡ್‌ಗೆ ಎರಡನೇ ಸ್ಥಾನ; 3, 4ನೇ ಸ್ಥಾನದಲ್ಲಿ ಕ್ರಮವಾಗಿ ಇಂಗ್ಲೆಂಡ್‌, ಆಸ್ಟ್ರೇಲಿಯಾ
Last Updated 13 ಮೇ 2021, 14:12 IST
ಅಕ್ಷರ ಗಾತ್ರ

ದುಬೈ: ಭಾರತ ಟೆಸ್ಟ್ ಕ್ರಿಕೆಟ್ ತಂಡ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗುರುವಾರ ಬಿಡುಗಡೆ ಮಾಡಿರುವ ವಾರ್ಷಿಕ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಒಟ್ಟು 24 ಪಂದ್ಯಗಳಿಂದ2914 ಪಾಯಿಂಟ್ಸ್‌ ಕಲೆ ಹಾಕಿರುವ ಭಾರತ 121 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ.

ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲಿರುವ ನ್ಯೂಜಿಲೆಂಡ್, ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಒಂದು ಪಾಯಿಂಟ್‌ನಿಂದ ಹಿಂದೆ ಉಳಿದಿದೆ. ಅದು 18 ಪಂದ್ಯಗಳಿಂದ 2166 ಪಾಯಿಂಟ್ಸ್ ಗಳಿಸಿದ್ದು 120 ರೇಟಿಂಗ್ ಪಾಯಿಂಟ್ಸ್‌ ಹೊಂದಿದೆ.

ಭಾರತ ತಂಡ ಈ ವರ್ಷ ಆಸ್ಟ್ರೇಲಿಯಾ ಎದುರಿನ ಸರಣಿಯನ್ನು 2–1ರಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3–1ರಲ್ಲಿ ಗೆದ್ದುಕೊಂಡಿತ್ತು. ಇದು, ರೇಟಿಂಗ್ ಪಾಯಿಂಟ್ ಹೆಚ್ಚಿಸಲು ನೆರವಾಗಿತ್ತು. ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ಎದುರಿನ ಸರಣಿಗಳಲ್ಲಿ 2–0 ಅಂತರದ ಜಯ ಗಳಿಸಿದ್ದು ನ್ಯೂಜಿಲೆಂಡ್‌ಗೆ ಅನುಕೂಲ ಆಗಿತ್ತು.

109 ರೇಟಿಂಗ್ ಪಾಯಿಂಟ್ಸ್‌ ಗಳಿಸಿರುವ ಇಂಗ್ಲೆಂಡ್ ಒಂದು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನ ಗಳಿಸಿದೆ. ಒಂದು ಸ್ಥಾನ ಕಳೆದುಕೊಂಡಿರುವ ಆಸ್ಟ್ರೇಲಿಯಾ ನಾಲ್ಕಕ್ಕೆ ಕುಸಿದಿದೆ. ಪಾಕಿಸ್ತಾನ ಮೂರು ಪಾಯಿಂಟ್‌ಗಳನ್ನು ಗಳಿಸುವುದರೊಂದಿಗೆ 94 ಪಾಯಿಂಟ್ ಕಲೆ ಹಾಕಿದ್ದರೂ ಐದನೇ ಸ್ಥಾನದಿಂದ ಮೇಲೇಳಲು ಸಾಧ್ಯವಾಗಲಿಲ್ಲ. ಬಾಂಗ್ಲಾದೇಶವನ್ನು 2–0ಯಿಂದ ಮಣಿಸಿ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಮಬಲ ಸಾಧಿಸಿರುವ ವೆಸ್ಟ್ ಇಂಡೀಸ್ (84) ಎರಡು ಸ್ಥಾನಗಳ ಪ್ರಗತಿ ಕಂಡು ಆರಕ್ಕೇರಿದೆ. ಇದು, 2013ರಿಂದ ಈಚೆಗೆ ತಂಡದ ಗರಿಷ್ಠ ಸಾಧನೆಯಾಗಿದೆ.

80 ಪಾಯಿಂಟ್ ಗಳಿಸಿರುವ ದಕ್ಷಿಣ ಆಫ್ರಿಕಾ ಮತ್ತು 78 ಪಾಯಿಂಟ್ ಗಳಿಸಿರುವ ಶ್ರೀಲಂಕಾ ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನಗಳಿಗೆ ಕುಸಿದಿವೆ. ರ‍್ಯಾಂಕಿಂಗ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ಕಳಪೆ ಗಳಿಕೆಯಾಗಿದೆ ಇದು. ಬಾಂಗ್ಲಾದೇಶ (46) ಮತ್ತು ಜಿಂಬಾಬ್ವೆ (35) ಉಳಿದ ಎರಡು ಸ್ಥಾನಗಳನ್ನು ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT