ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೇಗಿ ಬರಿಂದರ್ ಸರನ್ ನಿವೃತ್ತಿ

Published : 29 ಆಗಸ್ಟ್ 2024, 20:49 IST
Last Updated : 29 ಆಗಸ್ಟ್ 2024, 20:49 IST
ಫಾಲೋ ಮಾಡಿ
Comments

ನವದೆಹಲಿ: ಎಡಗೈ ವೇಗದ ಬೌಲರ್ ಬರಿಂದರ್ ಸರನ್ ಅವರು ಎಲ್ಲ ಮಾದರಿಗಳ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಘೋಷಿಸಿದರು. 

ಬರಿಂದರ್ ಅವರು ಭಾರತ ತಂಡವನ್ನು 2016ರಲ್ಲಿ ಆರು ಏಕದಿನ ಮತ್ತು ಎರಡು ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು.

‘ಅಧಿಕೃತವಾಗಿ ಇಂದು ನನ್ನ ಕ್ರಿಕೆಟ್ ಬೂಟುಗಳನ್ನು ಕಳಚಿ, ನೇತುಹಾಕಿರುವೆ. ಈ ಪಯಣದಲ್ಲಿ ಹಿಂದಿರುಗಿ ನೋಡಿದಾಗ ಧನ್ಯತಾ ಭಾವ ನನ್ನ ಮನವನ್ನು ಆವರಿಸುತ್ತದೆ. 2009ರಲ್ಲಿ ಬಾಕ್ಸಿಂಗ್‌ ಕ್ರೀಡೆ ಬಿಟ್ಟು, ಕ್ರಿಕೆಟ್‌ ಆಟಗಾರನಾದೆ. ಕ್ರಿಕೆಟ್ ನನಗೆ ಅಮೋಘ ಹಾಗೂ ಅದ್ಭುತವಾದ ಕಾಣಿಕೆಗಳನ್ನು ನೀಡಿದೆ‘ ಎಂದು ಹರಿಯಾಣದ 31 ವರ್ಷದ ಬರಿಂದರ್‌ ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. 

2015–16ರಲ್ಲಿ ಪರ್ತ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ಎದುರಿನ ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದರು.  ಏಕದಿನ ಕ್ರಿಕೆಟ್‌ನಲ್ಲಿ ಏಳು ಮತ್ತು ಟಿ20 ಕ್ರಿಕೆಟ್‌ನಲ್ಲಿ ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವನ್ ಪಂಜಾಬ್, ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಆಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT