ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಆಫ್ರಿಕಾ ಮಹಿಳಾ ತಂಡ ಭಾರತ ಪ್ರವಾಸ

ಬೆಂಗಳೂರಿನಲ್ಲಿ ಮೂರು ಏಕದಿನ ಪಂದ್ಯ, ಚೆನ್ನೈನಲ್ಲಿ ಟೆಸ್ಟ್, ಟಿ20
Published 14 ಮೇ 2024, 17:39 IST
Last Updated 14 ಮೇ 2024, 17:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ಜೂನ್ 16 ರಿಂದ ಜುಲೈ 9ರ ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, ದಶಕದ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಕ್ಕೆ ಭಾರತ ಆತಿಥ್ಯ ವಹಿಸಲಿದೆ. 

ಈ ಸರಣಿಯು ಒಂದು ಟೆಸ್ಟ್, ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಒಳಗೊಂಡಿದೆ ಎಂದು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.

ಏಕದಿನ ಪಂದ್ಯಗಳು (ಜೂನ್ 16, 19, 23) ಬೆಂಗಳೂರಿನಲ್ಲಿ ನಡೆಯಲಿದ್ದು, ಏಕೈಕ ಟೆಸ್ಟ್ (ಜೂನ್ 28–ಜುಲೈ1) ಮತ್ತು ಟಿ20 ಪಂದ್ಯಗಳು (ಜುಲೈ 5, 7, 9) ಚೆನ್ನೈನಲ್ಲಿ ನಡೆಯಲಿವೆ. ಉಭಯ ತಂಡಗಳು ಕೊನೆಯ ಬಾರಿಗೆ 2014ರ ನವೆಂಬರ್‌ನಲ್ಲಿ ಟೆಸ್ಟ್ ಪಂದ್ಯವನ್ನಾಡಿದ್ದವು.

ಸರಣಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್‌ 13ರಂದು ಏಕದಿನ ಅಭ್ಯಾಸ ಪಂದ್ಯದೊಂದಿಗೆ ಪ್ರಾರಂಭವಾಗಲಿದ್ದು, ಅಲ್ಲಿ ಪ್ರವಾಸಿ ತಂಡವು, ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ ಸೆಣಸಲಿದೆ.

ಏಕದಿನ ಪಂದ್ಯಗಳು 2022-2025 ರ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ ಭಾಗವಾಗಿದೆ. ಏಕದಿನ ಪಂದ್ಯ ಮಧ್ಯಾಹ್ನ 1.30 ಕ್ಕೆ ಪ್ರಾರಂಭವಾಗಲಿದ್ದು, ಟಿ20 ಪಂದ್ಯಗಳು ಸಂಜೆ 7 ರಿಂದ ಪ್ರಾರಂಭವಾಗಲಿವೆ.

ಸಾಂಪ್ರದಾಯಿಕ ಸ್ವರೂಪದಲ್ಲಿ ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಉತ್ತೇಜನ ನೀಡುವ ಬಿಸಿಸಿಐ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಉಪಕ್ರಮದ ಭಾಗವಾಗಿ ಟೆಸ್ಟ್ ಪಂದ್ಯ ಸೇರ್ಪಡೆಯಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ತಲಾ ಒಂದು ಟೆಸ್ಟ್ ಪಂದ್ಯ ಆಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT