ಸೋಮವಾರ, ಏಪ್ರಿಲ್ 12, 2021
27 °C
ವಿಶ್ವ ರಸ್ತೆ ಸುರಕ್ಷತಾ ಟಿ20 ಕ್ರಿಕೆಟ್ ಸರಣಿ

ವಿಶ್ವ ರಸ್ತೆ ಸುರಕ್ಷತಾ ಟಿ20 ಕ್ರಿಕೆಟ್ ಸರಣಿ: ಭಾರತಕ್ಕೆ ಬಾಂಗ್ಲಾ ಮೊದಲ ಎದುರಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವಿಶ್ವ ಕ್ರಿಕೆಟ್‌ನ ದಿಗ್ಗಜರು ಆಡಲಿರುವ ರಸ್ತೆ ಸುರಕ್ಷತಾ ವಿಶ್ವ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಬಾಂಗ್ಲಾದೇಶದ ಸವಾಲು ಎದುರಾಗಿದೆ. ಮಾರ್ಚ್ 5ರಂದು ಛತ್ತೀಸಗಡದ ರಾಯಪುರದಲ್ಲಿ ಈ ಹಣಾಹಣಿ ನಡೆಯಲಿದೆ.

ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್‌ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯಗಳು ಆಯೋಜನೆಯಾಗಿದ್ದು, ಮಾರ್ಚ್‌ 7ರಂದು ನಡೆಯುವ ಸೆಣಸಾಟದಲ್ಲಿ ಇಂಗ್ಲೆಂಡ್‌–ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಮಾರ್ಚ್ 17ರಂದು ಮೊದಲ ಸೆಮಿಫೈನಲ್‌ ನಡೆಯಲಿದೆ. ನಾಲ್ಕರ ಘಟ್ಟದ ಎರಡನೆಯ ಪಂದ್ಯ 19ರಂದು ಆಯೋಜನೆಯಾಗಿದೆ. ಮಾರ್ಚ್‌ 21ರಂದು ಫೈನಲ್ ಪಂದ್ಯ ನಿಗದಿಯಾಗಿದೆ.

ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿರುವ ಈ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್‌, ಬ್ರಯಾನ್ ಲಾರಾ, ಮುತ್ತಯ್ಯ ಮುರಳೀಧರನ್‌, ತಿಲಕರತ್ನೆ ದಿಲ್‌ಶಾನ್‌, ಸೇರಿದಂತೆ ಆರು ದೇಶಗಳ (ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌) ಖ್ಯಾತ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು