3.3 ಓವರ್‌ಗಳಲ್ಲಿ ಮುಗಿದ ಭಾರತದ ಆಟ
ಮೂರನೇ (ಶನಿವಾರ) ದಿನದಾಟ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿದ್ದ ಟೀಂ ಇಂಡಿಯಾ, ಆ ಮೊತ್ತಕ್ಕೆ ಇಂದು 11 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ, ದಿನದಾಟ ಆರಂಭವಾದ 3.3 ಓವರ್‌ಗಳಲ್ಲೇ ಭಾರತದ ಇನಿಂಗ್ಸ್ ಮುಕ್ತಾಯವಾಯಿತು. ಅಮೋಘ ಶತಕ ಸಿಡಿಸಿ ಕ್ರೀಸ್‌ನಲ್ಲಿ ಉಳಿದಿದ್ದ ನಿತೀಶ್ ಕುಮಾರ್ ರೆಡ್ಡಿ 114 ರನ್ ಗಳಿಸಿದ್ದಾಗ ಔಟಾದರು. 4 ರನ್ ಗಳಿಸಿದ್ದ ಸಿರಾಜ್ ಇನ್ನೊಂದು ತುದಿಯಲ್ಲಿ ಅಜೇಯರಾಗಿ ಉಳಿದರು. ಅವರ ಆಟದ ಬಲದಿಂದ ಬಾರತ 369 ರನ್ ಗಳಿಸಲು ಸಾಧ್ಯವಾಯಿತು.