ಚಿತ್ತಾಗಾಂಗ್: ಇಲ್ಲಿ ಆರಂಭವಾಗಿರುವ ಭಾರತ–ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭೋಜನ ವಿರಾಮದ ವೇಳೆಗೆ ಭಾರತ ತಂಡ 3 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿತ್ತು.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜಹೂರ್ ಅಹಮ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ತಂಡದ ನಾಯಕ ಕೆ.ಎಲ್. ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಭಾರತ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದೆ. ಕೆ.ಎಲ್. ರಾಹುಲ್ 22, ಶುಭಮನ್ ಗಿಲ್ 20 ಮತ್ತು ವಿರಾಟ್ ಕೊಹ್ಲಿ 1 ರನ್‌ಗೆ ಪೆವಿಲಿಯನ್ ಸೇರಿದ್ಧಾರೆ. ರಿಷಭ್ ಪಂತ್ ಮತ್ತು ಚೆತೇಶ್ವರ್ ಪೂಜಾರ ಜೊತೆಯಾಟದಲ್ಲಿ 37 ರನ್ ಸೇರಿಸಿದ್ದಾರೆ.
ಭಾಂಗ್ಲಾ ಪರ ತೈಜಿಮುಲ್ ಇಸ್ಲಾಂ 2 ಮತ್ತು ಖಾಲೀದ್ ಅಹಮ್ಮದ್ 1 ವಿಕೆಟ್ ಪಡೆದಿದ್ದಾರೆ.
ಗಾಯಗೊಂಡಿರುವ ಭಾರತ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುತ್ತಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.