ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ದಾಖಲೆಯ ಆಟ; ಏಕದಿನ ಪಂದ್ಯಗಳಲ್ಲಿ ವೇಗದ 11 ಸಾವಿರ ರನ್

ವಿಶ್ವಕಪ್‌ ಕ್ರಿಕೆಟ್‌
Last Updated 16 ಜೂನ್ 2019, 17:14 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌:ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಮಾಡಿದರು.

230 ಪಂದ್ಯ(222 ಇನಿಂಗ್ಸ್‌)ಗಳಲ್ಲಿ ಈ ಮೈಲುಗಲ್ಲು ಮುಟ್ಟಿದ ಅವರು ಸಚಿನ್ ತೆಂಡೂಲ್ಕರ್ (284 ಪಂದ್ಯ) ದಾಖಲೆಯನ್ನು ಮುರಿದರು. 2002ರ ಜನವರಿ 28ರಂದು ಕಾನ್ಪುರದಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಸಚಿನ್‌ 11 ಸಾವಿರ ರನ್ ತಲುಪಿದ್ದರು.

ಭಾರತ–ಪಾಕಿಸ್ತಾನ ನಡುವೆ ಭಾನುವಾರದಪಂದ್ಯದಲ್ಲಿ ಅವರು 57 ರನ್‌ ಗಳಿಸಿದಾಗ ಈ ದಾಖಲೆ ತಲುಪಿದರು. ಇಲ್ಲಿ ಅವರು ಒಟ್ಟು 77 ರನ್‌ ಗಳಿಸಿದರು. ಕಳೆದಪಂದ್ಯದಲ್ಲಿ ಕೊಹ್ಲಿ82 ರನ್ ದಾಖಲಿಸಿದ್ದರು.

ಕೊಹ್ಲಿ, ಹನ್ನೊಂದು ಸಾವಿರ ರನ್‌ಗಳ ಗಡಿ ದಾಟಿದ ವಿಶ್ವದ ಒಂಬತ್ತನೇ ಆಟಗಾರ ಹಾಗೂಭಾರತದ ಪರ ಸಚಿನ್‌ ತೆಂಡೂಲ್ಕರ್‌ ಮತ್ತು ಸೌರವ್‌ ಗಂಗೂಲಿ ನಂತರದ ಕ್ರಿಕೆಟಿಗನಾಗಿದ್ದಾರೆ.

ವೇಗವಾಗಿ 11 ಸಾವಿರ ರನ್‌ ಪೂರೈಸಿದ ಆಟಗಾರರ ವಿವರ

ಆಟಗಾರ ದೇಶ ಪಂದ್ಯ ಇನಿಂಗ್ಸ್‌
ವಿರಾಟ್‌ ಕೊಹ್ಲಿ ಭಾರತ 230 222
ಸಚಿನ್‌ ತೆಂಡೂಲ್ಕರ್‌ ಭಾರತ 284 276
ರಿಕಿ ಪಾಂಟಿಂಗ್‌ ಆಸ್ಟ್ರೇಲಿಯಾ 295 286
ಸೌರವ್‌ ಗಂಗೂಲಿ ಭಾರತ 298 288
ಜಾಕ್‌ಕಾಲಿಸ್‌ ದಕ್ಷಿಣ ಆಫ್ರಿಕಾ 307 293
ಕುಮಾರಸಂಗಾಕ್ಕಾರ ಶ್ರೀಲಂಕಾ 340 318
ಇಂಜಮಾಮ್‌ ಉಲ್‌ ಹಕ್‌ ಪಾಕಿಸ್ತಾನ 349 324
ಸನತ್‌ ಜಯಸೂರ್ಯ ಶ್ರೀಲಂಕಾ 363 354
ಮಹೇಲಾ ಜಯವರ್ದನೆ ಶ್ರೀಲಂಕಾ 394 368

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT