ಕೋಲ್ಕತ್ತ: ದಕ್ಷಿಣ ಆಫ್ರಿಕಾ ತಂಡವು 15 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಿಲ್ಲ. ಆದರೆ ಮುಂಬರುವ ಸರಣಿಯಲ್ಲಿ ಅದನ್ನು ಕೊನೆಗೊಳಿಸುವ ಹಸಿವು ಮತ್ತು ಬಯಕೆ ಇದೆ ಎಂದು ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 14 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಗಳು ಕ್ರಮವಾಗಿ ಕೊಲ್ಕತ್ತ ಹಾಗೂ ಗುವಾಹಟಿಯಲ್ಲಿ ನಡೆಯಲಿವೆ.

ಭಾರತದಲ್ಲಿ ಸರಣಿ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕಿರುವ ಸವಾಲುಗಳನ್ನು ಕೇಶವ್ ಮಹರಾಜ್ ಒಪ್ಪಿಕೊಂಡಿದ್ದಾರೆ. ‘ಭಾರತ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಬೇಕೆಂಬುದು ನಮ್ಮ ನಿಜವಾದ ಹಸಿವು ಮತ್ತು ಬಯಕೆಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ನಲ್ಲಿ ಇದು ಅತ್ಯಂತ ಕಠಿಣ ಪ್ರವಾಸಗಳಲ್ಲಿ ಒಂದಾಗಲಿದೆ’ ಎಂದಿದ್ದಾರೆ.

‘ಇದು ನಮ್ಮ ಅತೀ ದೊಡ್ಡ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ನಾವು ಭಾವಿಸುತ್ತೇನೆ. ನಮ್ಮ ತಂಡ ಡಬ್ಲೂಟಿಸಿ ಸೈಕಲ್ನಲ್ಲಿ ಎಷ್ಟರ ಮಟ್ಟಿಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನು ತಿಳಿದುಕೊಳ್ಳಲು ಭಾರತ ಪ್ರವಾಸ ಉತ್ತಮ ಅವಕಾಶ ನೀಡಲಿದೆ’ ಎಂದು ತಿಳಿಸಿದ್ದಾರೆ.

‘ನಾವು ಭಾರತದ ಪಿಚ್ಗಳಲ್ಲಿ ಪಾಕಿಸ್ತಾನದಲ್ಲಿ ನೋಡಿದಷ್ಟು ಸ್ಪಿನ್ ಸ್ನೇಹಿ ಪಿಚ್ಗಳನ್ನು ನೋಡುವುದಿಲ್ಲ ಎಂದು ಭಾವಿಸುತ್ತೇನೆ. ಇಲ್ಲಿ ಬ್ಯಾಟರ್ ಹಾಗೂ ಬೌಲರ್ ಇಬ್ಬರಿಗೂ ಸಮಾನ ಅವಕಾಶ ನೀಡುತ್ತಾರೆ. ನಾವು ನಮ್ಮ ಸಾಂಪ್ರದಾಯಿಕ ಆಟಕ್ಕೆ ಮನ್ನಣೆ ನೀಡುತ್ತೇವೆ’ ಎಂದು ಕೇಶವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.