ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಶ್ರೀಲಂಕಾ ಏಕದಿನ ಪಂದ್ಯ: ಚಾಹಲ್, ಕುಲದೀಪ್ ಸ್ಪಿನ್ ಮೋಡಿ

ಭಾರತ–ಶ್ರೀಲಂಕಾ ಏಕದಿನ ಪಂದ್ಯ: ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಪದಾರ್ಪಣೆ
Last Updated 18 ಜುಲೈ 2021, 16:28 IST
ಅಕ್ಷರ ಗಾತ್ರ

ಕೊಲಂಬೊ(ಪಿಟಿಐ): ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಪ್ರೇಮದಾಸ ಕ್ರೀಡಾಂಗಣದಲ್ಲಿ ತಮ್ಮ ಮೋಡಿ ತೋರಿಸಿದರು.

ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಈ ಜೋಡಿಯ ಬೌಲಿಂಗ್ ಮುಂದೆ ಶ್ರೀಲಂಕಾ ತಂಡವು ಭಾನುವಾರ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 262 ರನ್‌ ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೆಯ ತಂಡದ ಆರಂಭಿಕ ಜೋಡಿ ಅವಿಷ್ಕಾ ಫರ್ನಾಂಡೊ (33 ರನ್) ಮತ್ತು ಮಿನೋದ್ ಭಾನುಕಾ (27 ರನ್) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿಯು 49 ರನ್‌ ಗಳಿಸಿದ್ದಾಗ, ಚಾಹಲ್ ಹತ್ತನೇ ಓವರ್‌ನಲ್ಲಿ ಈ ಜೊತೆಯಾಟ ಮುರಿದರು. ಅವಿಷ್ಕಾ ಫರ್ನಾಂಡೊ ವಿಕೆಟ್ ಗಳಿಸಿದರು.

ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶನುಕಾ ರಾಜಪಕ್ಷ (24; 22ಎ) ಅವರು ಭಾನುಕಾ ಜೊತೆಗೂಡಿ ಇನಿಂಗ್ಸ್‌ಗೆ ಸ್ಥಿರತೆ ನೀಡುವ ಪ್ರಯತ್ನ ಮಾಡಿದರು. ಆದರೆ ಈ ಜೊತೆಯಾಟವನ್ನು ಭಾನುಕಾ ವಿಕೆಟ್ ಗಳಿಸಿದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಸಂಭ್ರಮಿಸಿದರು. ಅದೇ ಓವರ್‌ನಲ್ಲಿ ಯಾದವ್ ಅವರು ಮಿನೊದ್ ವಿಕೆಟ್‌ ಕೂಡ ಗಳಿಸಿದರು.

ಇವರಿಬ್ಬರೂ ಬೌಲರ್‌ಗಳಿಗೆ ಉತ್ತಮ ಜೊತೆ ನೀಡಿದ ಕೃಣಾಲ್ ಪಾಂಡ್ಯ ಮತ್ತು ಮಧ್ಯಮವೇಗಿ ಚಾಹರ್ (37ಕ್ಕೆ2) ಶ್ರೀಲಂಕಾ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವ ಪ್ರಯತ್ನ ಮಾಡಿದರು.

ಮಧ್ಯಮಕ್ರಮಾಂಕದಲ್ಲಿ ಚರಿತ ಅಸ್ಲೆಂಕಾ (38) ಮತ್ತು ನಾಯಕ ದಸುನ್ ಶನಕಾ (39) ಅವರು ಉತ್ತಮವಾಗಿ ಆಡಿದರು.

ಆದರೆ, ಕೊನೆಯ ಹಂತದಲ್ಲಿ ಬೀಸಾಟವಾಡಿದ ಚಾಮಿಕಾ ಕರುಣಾರತ್ನೆ (ಔಟಾಗದೆ 43; 35ಎ, 1ಬೌಂ, 2ಸಿ) ತಂಡವು ಹೋರಾಟದ ಮೊತ್ತ ಗಳಿಸಲು ನೆರವಾದರು.

ಭಾರತ ತಂಡದ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT