ದೆಹಲಿ: ಭಾರತ ತಂಡ ಬ್ಯಾಟರ್ಗಳು, ವೆಸ್ಟ್ ಇಂಡೀಸ್ ಬೌಲರ್ಗಳನ್ನು ಮತ್ತೊಮ್ಮೆ ಮನಸಾರೆ ದಂಡಿಸಿದರು. ಶುಭಮನ್ ಗಿಲ್ ಅವರು ಭೋಜನವಿರಾಮ ಕಳೆದು ಒಂದು ಗಂಟೆಯ ನಂತರ 5 ವಿಕೆಟ್ಗೆ 518 ರನ್ಗಳಾಗಿದ್ದಾಗ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡರು. ತಮ್ಮ ಬೌಲರ್ಗಳು, ಎದುರಾಳಿ ಬ್ಯಾಟರ್ಗಳನ್ನು ಕಂಗೆಡಿಸಿ ಮತ್ತೊಮ್ಮೆ ಬೇಗನೇ ಪಂದ್ಯ ಗೆಲ್ಲಬೇಕೆಂಬ ನಿರ್ಧಾರ ನಾಯಕನಲ್ಲಿದ್ದಂತೆ ಕಂಡಿತು.

ಈ ಸರಣಿಯ ನಂತರ ಗಿಲ್ ಮತ್ತು ತಂಡದ ಕೆಲವರಿಗೆ ಸೀಮಿತ ಓವರುಗಳ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಬಿಡುವೂ ಕಡಿಮೆಯಿದೆ. ಅ. 18ರಿಂದ ಭಾರತ ತಂಡವು ಅಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಬೇಕಿದೆ. ಸತತವಾಗಿ ಆಡುತ್ತಿರುವ ಗಿಲ್ ಅವರಿಗೆ ಈ ಎರಡನೇ ಟೆಸ್ಟ್ ಪಂದ್ಯವನ್ನು ಬೇಗ ಗೆದ್ದಲ್ಲಿ ಹೆಚ್ಚಿಗೆ ಸಿಗಲಿರುವ ದಿನಗಳು ಅಮೂಲ್ಯವಾಗಲಿದೆ. ಡಿಕ್ಲೇರ್ಡ್ ಮಾಡುವ ಅವರ ನಿರ್ಧಾರದ ಹಿಂದೆ ಈ ಲೆಕ್ಕಾಚಾರ ಇತ್ತು.

ಆದರೆ ವೆಸ್ಟ್ ಇಂಡೀಸ್ ತಂಡ ಈ ಬಾರಿ ಪ್ರತಿರೋಧ ಪ್ರದರ್ಶಿಸಿತು. ಅಲಿಕ್ ಅಥನೇಝ್ (41) ಮತ್ತು ತೇಜನಾರಾಯಣ ಚಂದ್ರಪಾಲ್ (34) ಭಾರತದ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ವಿವ್ ರಿಚರ್ಡ್ಸ್ ಮತ್ತು ಬ್ರಯಾನ್ ಲಾರಾ ಅವರ ಮೊಗದಲ್ಲಿ ಕೆಲಕಾಲವಾದರೂ ಸಂಭ್ರಮ ಮೂಡಲು ಇವರಿಬ್ಬರ ಆಟ ಕಾರಣವಾಯಿತು. ಆದರೆ ಭರವಸೆಯ ಆರಂಭ ಮಾಡಿದ್ದ ಅಥನೇಝ್ ಮತ್ತು ಚಂದ್ರಪಾಲ್ ಅಲ್ಪ ಅಂತರದಲ್ಲಿ ನಿರ್ಗಮಿಸಿದರು. ಎರಡನೆ ದಿನದಾಟ ಮುಗಿದಾಗ ವೆಸ್ಟ್ ಇಂಡೀಸ್ 4 ವಿಕೆಟ್ಗೆ 140 ರನ್ ಗಳಿಸಿ ಕುಸಿತದ ಭೀತಿಯಲ್ಲಿದೆ. ಅದು ಭಾರತದ ಮೊತ್ತಕ್ಕಿಂತ ಇನ್ನೂ 378 ರನ್ಗಳಷ್ಟು ಹಿಂದೆಯಿದೆ.

ಮೊದಲ ಟೆಸ್ಟ್ ರೀತಿಯಲ್ಲಿ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಮತ್ತು ಸಿರಾಜ್ ವೆಸ್ಟ್ ಇಂಡೀಸ್ ಆಟಗಾರರನ್ನು ಪರೀಕ್ಷೆಗೊಳಪಡಿಸಿದರು. ಆದರೆ ಅದೃಷ್ಟ ಇರಲಿಲ್ಲ. ಬೂಮ್ರಾ ಅವರಂತೂ ಎಡಗೈ ಆಟಗಾರರಾದ ಕ್ಯಾಂಪ್ಬೆಲ್ ಮತ್ತು ಚಂದ್ರಪಾಲ್ ಅವರನ್ನು ಹಲವು ಬಾರಿ ವಂಚಿಸಿದರು. ಸಿರಾಜ್ಗೂ ಅದೃಷ್ಟ ಇರಲಿಲ್ಲ. ಆರಂಭಿಕ ಆಟಗಾರರು ಕಠಿಣ ಅವಧಿಯನ್ನು ನಿಭಾಯಿಸಿದರು.

ಅಮೋಘ ಕ್ಯಾಚ್

ಆದರೆ ಗಿಲ್ ತಡಮಾಡದೇ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜ ಅವರನ್ನು ಎಂಟನೇ ಓವರಿನಲ್ಲಿ ದಾಳಿಗಿಳಿಸಿದರು. ಜಡೇಜ ಕೇವಲ ಎರಡನೇ ಎಸೆತದಲ್ಲೇ ಯಶಸ್ಸು ದೊರಕಿಸಿಕೊಟ್ಟರು. ಕ್ಯಾಂಪ್ಬೆಲ್ ಅವರ ಬಿರುಸಿನ ಸ್ವೀಪ್ ಶಾಟ್ನಲ್ಲಿ ಚೆಂಡು ಯಾರೂ ಊಹಿಸದ ರೀತಿ ಶಾರ್ಟ್ಲೆಗ್ನಲ್ಲಿದ್ದ ಸಾಯಿ ಸುದರ್ಶನ್ ಬೊಗಸೆಯೊಳಗೆ ಸೇರಿತು.

ಇದು ಕುಸಿತಕ್ಕೆ ದಾರಿಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅಥನೇಝ್ ಮತ್ತು ಚಂದ್ರಪಾಲ್ ಪ್ರತಿಹೋರಾಟ ನಡೆಸಿದರು. ಅಕ್ರಮಣವೇ ರಕ್ಷಣೆಯ ಉತ್ತಮ ತಂತ್ರ ಎಂಬಂತೆ ಅವರು ಸ್ಪಿನ್ನರ್ಗಳ ಮೇಲೆ ಪ್ರಹಾರ ನಡೆಸಿದರು. ಜಡೇಜ, ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಲಯಕಂಡುಕೊಳ್ಳಲು ಅವಕಾಶ ನೀಡಲಿಲ್ಲ. ಅದರಲ್ಲೂ ಸ್ವೀಪ್ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು.

ಆದರೆ ಭಾರತ ಕಾದು ಯಶಸ್ಸು ಗಳಿಸಿತು. 28ನೇ ಓವರಿನಲ್ಲಿ ಜಡೇಜ ಅವರೇ ವಿಕೆಟ್ ಗಳಿಸಿಕೊಟ್ಟರು. ಮುಂದೆ ಬಂದು ಆಡುವ ಪ್ರಲೋಭನೆಗೆ ಒಳಗಾದ ಚಂದ್ರಪಾಲ್ ಸ್ಲಿಪ್ನಲ್ಲಿದ್ದ ರಾಹುಲ್ಗೆ ಕ್ಯಾಚಿತ್ತರು. 66 ರನ್ಗಳ ಜೊತೆಯಾಟ ಅಂತ್ಯಗೊಂಡಿತು. ಕೆಲವೇ ಹೊತ್ತಿನ ನಂತರ ಅಥನೇಝ್ ಕೂಡ ನಿರ್ಗಮಿಸಿದರು. ಕುಲದೀಪ್ ಬೌಲಿಂಗ್ನಲ್ಲಿ ಸ್ಲಾಗ್ ಸ್ವೀಪ್ಗೆ ಯತ್ನಿಸಿದಾಗ ಮಿಡ್ವಿಕೆಟ್ನಲ್ಲಿದ್ದ ಜಡೇಜ ಕ್ಯಾಚ್ ಹಿಡಿದರು.

ನಾಯಕ ರೋಸ್ಟನ್ ಚೇಸ್ ಏಳು ಎಸೆತಗಳನ್ನಷ್ಟೇ ಆಡಿದರು. 2 ವಿಕೆಟ್ಗೆ 87 ರನ್ ಗಳಿಸಿದ್ದ ಪ್ರವಾಸಿಗರು 107 ರನ್ಗಳಾಗುವಷ್ಟರಲ್ಲಿ ಮತ್ತೆರಡು ವಿಕೆಟ್ ಕಳೆದುಕೊಂಡಿದ್ದರು. ಭಾರತಕ್ಕೆ ಹಿಡಿತ ಪಡೆಯಲು ಅಗತ್ಯವಿದ್ದ ವೇದಿಕೆಯನ್ನು ಸ್ಪಿನ್ನರ್ಗಳು ಸಜ್ಜುಗೊಳಿಸಿದರು.

ಗಿಲ್ ಶತಕ

ಇದಕ್ಕೆ ಮೊದಲು, ಗಿಲ್ (ಔಟಾಗದೇ 129, 196ಎ, 4x16, 6x2) ಈ ಋತುವಿನ ಯಶಸ್ಸನ್ನು ಮುಂದುವರಿಸುವಂತೆ ಅಜೇಯ ಶತಕ ಬಾರಿಸಿದರು. ಆ ಮೂಲಕ ಭಾರತ ದೊಡ್ಡ ಮೊತ್ತ ತಲುಪಲು ಕಾರಣರಾದರು. ಅತ್ಯುತ್ತಮ ಲಯದಲ್ಲಿದ್ದ ಅವರಿಗೆ ಇದು ಟೆಸ್ಟ್ಗಳಲ್ಲಿ ನಾಯಕನಾಗಿ ಐದನೇ ಮತ್ತು ಒಟ್ಟಾರೆ ಹತ್ತನೇ ಶತಕ.

ದಿನದ ಎರಡನೇ ಓವರಿನಲ್ಲಿ ಯಶಸ್ವಿ ಜೈಸ್ವಾಲ್ (175, 258ಎ, 4x22) ರನೌಟ್ ಆದರು. ನಿತೀಶ್ ಕುಮಾರ್ ಮತ್ತು ಧ್ರುವ್ ಜುರೇಲ್ ಜೊತೆಗೆ ಗಿಲ್ ತಂಡದ ಮೊತ್ತ ಉಬ್ಬಿಸುತ್ತ ಹೋದರು. ಹೀಗಾಗಿ ಅವರಿಗೆ ಬೇಗನೇ ಇನಿಂಗ್ಸ್ ಡಿಕ್ಲೇರ್ಡ್ ಮಾಡುವ ಧೈರ್ಯವೂ ಮೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.