ಕೊಲಂಬೊ: ಬದುಕು ಒಡ್ಡಿದ ಎಲ್ಲ ಕಠಿಣ ಸವಾಲುಗಳನ್ನೂ ಮೆಟ್ಟಿ ನಿಂತ ಭಾರತ ಮಹಿಳಾ ಕ್ರಿಕೆಟಿಗರು ಭಾನುವಾರ ಚಾರಿತ್ರಿಕ ಸಾಧನೆ ಮಾಡಿದರು. ಇದೇ ಮೊದಲ ಸಲ ನಡೆದ ಅಂಧ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸಿದರು.

ಕರ್ನಾಟಕದ ದೀಪಿಕಾ ಟಿ.ಸಿ. ಅವರ ನಾಯಕತ್ವದ ಭಾರತ ತಂಡವು ಫೈನಲ್ನಲ್ಲಿ ನೇಪಾಳ ವಿರುದ್ಧ 7 ವಿಕೆಟ್ಗಳಿಂದ ಜಯಿಸಿತು. ಪಿ. ಸಾರಾ ಒವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಕಿಣಿ..ಕಿಣಿ.. ಸದ್ದು ಮಾಡುತ್ತ ಬಂದ ಚೆಂಡಿನ (ಪ್ಲಾಸ್ಟಿಕ್ ಚೆಂಡಲ್ಲಿ ಲೋಹದ ಗುಂಡುಗಳಿರುತ್ತವೆ) ಜಾಡು ಹಿಡಿದು ಆಡುವ ಈ ಕ್ರಿಕೆಟ್ನಲ್ಲಿ ನೇಪಾಳದ ಬ್ಯಾಟರ್ಗಳು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 114 ರನ್ ಮಾಡಿದರು. ಭಾರತದ ಬೌಲರ್ಗಳು ಉತ್ತಮವಾಗಿ ಆಡಿದರು. ಇದರಿಂದಾಗಿ ನೇಪಾಳದ ಇನಿಂಗ್ಸ್ನಲ್ಲಿ ಕೇವಲ ಒಂದು ಬೌಂಡರಿ ಮಾತ್ರ ದಾಖಲಾಯಿತು.

ಗುರಿ ಬೆನ್ನಟ್ಟಿದ ಭಾರತ ತಂಡವು 12 ಓವರ್ಗಳಲ್ಲಿ 3 ವಿಕೆಟ್ಗಳಿಗೆ 117 ರನ್ ಗಳಿಸಿ ಜಯಭೇರಿ ಬಾರಿಸಿತು. ತಂಡದ ಪೂಲಾ ಸೊರೆನ್ ಅವರು ಔಟಾಗದೇ 44 ರನ್ ಗಳಿಸಿ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.

ಜಯ ಗಳಿಸಿದ ನಂತರ ಆಟಗಾರ್ತಿಯರ ಸಂಭ್ರಮ ಮುಗಿಲುಮುಟ್ಟಿತು. ನೀಲಿ ಪೋಷಾಕುಗಳಲ್ಲಿದ್ದ ಹುಡುಗಿಯರು ಆನಂದಭಾಷ್ಪ ಸುರಿಸಿದರು. ಪರಸ್ಪರ ಆಲಂಗಿಸಿಕೊಂಡು ಕುಣಿದಾಡಿದರು. ತ್ರಿವರ್ಣಧ ಧ್ವಜ ಹಿಡಿದು ಮೈದಾನದಲ್ಲಿ ಓಡಿದರು.

ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಜಯಿಸಿತ್ತು. ಶನಿವಾರ ನಡೆದ ಇನ್ನೊಂದು ಸೆಮಿಫೈನಲ್ನಲ್ಲಿ ನೇಪಾಳ ತಂಡವು ಪಾಕಿಸ್ತಾನ ಎದುರು ಗೆದ್ದಿತ್ತು.

ಭಾರತ ಮತ್ತು ಶ್ರೀಲಂಕಾ ತಂಡಗಳು ಜಂಟಿ ಆತಿಥ್ಯ ವಹಿಸಿದ್ದವು. ಲಂಕಾ ತಂಡವು ಈ ಟೂರ್ನಿಯಲ್ಲಿ ಪ್ರಾಥಮಿಕ ಸುತ್ತಿನ ಐದು ಪಂದ್ಯಗಳಲ್ಲಿ ಅಮೆರಿಕ ವಿರುದ್ಧ ಮಾತ್ರ ಜಯಿಸಿತ್ತು.

ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಸ್ಪರ್ಧಿಸಿದ್ದವು. ಪಾಕಿಸ್ತಾನ ತಂಡದ ಮೆಹರೀನ್ ಅಲಿ (ಬಿ3) ಅವರು ಟೂರ್ನಿಯಲ್ಲಿ ಒಟ್ಟು 600 ರನ್ ಗಳಿಸಿದರು. ಅದರಲ್ಲಿ ಎರಡು ಶತಕಗಳೂ ಇದ್ದವು.

ಮೂರು ಬಗೆಯ ಅಂಧತ್ವ

ಬಿ1; ಪೂರ್ಣ ಅಂಧತ್ವ ಇರುವ ಆಟಗಾರ್ತಿಯರು

ಬಿ2: ಸುಮಾರು 2 ಮೀಟರ್ ದೂರ ನೋಡಬಲ್ಲರು

ಬಿ3: 6 ರಿಂದ 8 ಮೀಟರ್ಗಳವರೆಗೆ ದೃಷ್ಟಿ ಹಾಯಿಸಬಲ್ಲರು.

ನಿಯಮದ ಪ್ರಕಾರ ಈ ಮೂರು ಬಗ್ಗೆಯ ಅಟಗಾರ್ತಿಯರೂ ತಂಡದಲ್ಲಿರಬೇಕು. ಭಾಗಶಃ ಅಂಧತ್ವ ಇರುವವರು ಪೂರ್ಣ ಅಂಧರಿಗೆ ಸಹಾಯ ಮಾಡುತ್ತ ಪರಸ್ಪರ ತಂಡವಾಗಿ ರೂಪುಗೊಳ್ಳುವ ಬಗ್ಗೆ ಅಪ್ತವಾದುದು. ಅವರಿಗೆ ಅರಿವಿಲ್ಲದೇ ಪರಸ್ಪರ ಉತ್ತಮ ಸ್ನೇಹಿತರಾಗಿ ಜೀವನ ಮತ್ತು ವ್ಯಕ್ತಿತ್ವವನ್ನು ಕ್ರಿಕೆಟ್ ಮೂಲಕ ಕಟ್ಟಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.