ಮಂಗಳವಾರ, ಜನವರಿ 18, 2022
22 °C

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭರವಸೆಯ ಕ್ರಿಕೆಟ್‌ ಆಟಗಾರ ಶ್ರೇಯಸ್ ಗೋಪಾಲ್‌ ಅವರು ಬಹುಕಾಲದ ಗೆಳತಿ ನಿಖಿತಾ ಅವರನ್ನು ಮದುವೆಯಾಗಿದ್ದಾರೆ. 

ಈ ಬಗ್ಗೆ ಶ್ರೇಯಸ್‌ ಗೋಪಾಲ್‌ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ರಣಜಿ ಸೇರಿದಂತೆ ಐಪಿಎಲ್‌ನಲ್ಲಿ ಶ್ರೇಯಸ್‌ ಉತ್ತಮ ಸಾಧನೆ ತೋರಿದ್ದಾರೆ. ಅವರು ಆರ್‌ಸಿಬಿ, ರಾಜಸ್ತಾನ್‌ ರಾಯಲ್ಸ್‌  ಪ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಕೋವಿಡ್‌ ಪರಿಣಾಮ ಅವರು ಪೂರ್ಣ ಪ್ರಮಾಣದಲ್ಲಿ ಆಟವಾಡಿರಲಿಲ್ಲ.

ಇದೀಗ ಗೆಳತಿ ನಿಖಿತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಆಪ್ತರು ಹಾಗೂ ಗೆಳೆಯರಷ್ಟೆ ಭಾಗವಹಿಸಿದ್ದರು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು