‘ಮೇ 17ರಂದು ಬಿಡುಗಡೆಯಾಗಿರುವ ಆರೋಗ್ಯ ಸುರಕ್ಷಾ ಕಾಯ್ದೆಯಲ್ಲಿ ವಿವರಿಸಿರುವಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನಡೆಸಲು ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದೆ. ಭಾರತ ತಂಡವು ಇಂಗ್ಲೆಂಡ್ ತಲುಪಿದ ಬಳಿಕ ನೇರವಾಗಿ ಹ್ಯಾಂಪ್‌ಶೈರ್ ಬೌಲ್‌ನ ಹೊಟೇಲ್‌ಗೆ ತೆರಳಲಿದೆ. ಅಲ್ಲಿ ಕೋವಿಡ್ ಪರೀಕ್ಷೆಗಳಿಗೆ ಒಳಗಾದ ಬಳಿಕ ಆಟಗಾರರು ವ್ಯವಸ್ಥಿತ ಪ್ರತ್ಯೇಕವಾಸಕ್ಕೆ ತೆರಳಲಿದ್ದಾರೆ‘ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.