ಶನಿವಾರ, ನವೆಂಬರ್ 23, 2019
17 °C

ಭಾರತ–ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌: ರೋಹಿತ್ ಶರ್ಮಾ ದ್ವಿಶತಕ

Published:
Updated:
Prajavani

ರಾಂಚಿ: ‘ಮುಂಬೈಕರ್’ ರೋಹಿತ್ ಶರ್ಮಾ ಭಾನುವಾರದ ಪಂದ್ಯದಲ್ಲಿ ದ್ವಿಶತಕ ಗಳಿಸಿ, ಹೆಮ್ಮೆಯಿಂದ ಬೀಗಿದರು.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ 3ನೇ ಟೆಸ್ಟ್‌ನಲ್ಲಿ ರೋಹಿತ್‌ ದ್ವಿಶತಕದ ಸಂಭ್ರಮದೊಂದಿಗೆ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ರಾರಾಜಿಸಿದರು.

ರೋಹಿತ್‌ ಆಟಕ್ಕೆ ಮುಂಬೈಕರ್ ಅಜಿಂಕ್ಯ ರಹಾನೆ ಕೂಡ ಜತೆ ನೀಡಿದರು. ರೋಹಿತ್‌ ದ್ವಿಶತಕ ಗಳಿಸುವ ಮೊದಲು ಅಜಿಂಕ್ಯ ಶತಕ ಪೂರೈಸಿ ಸಂಭ್ರಮಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ರೋಹಿತ್‌ ಅವರ ಆರನೇ ಶತಕ. 30ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅವರು ಒಟ್ಟು ಎರಡು ಸಾವಿರ ರನ್‌ಗಳನ್ನು ಸೇರಿಸಿದ್ದಾರೆ. 

* ಇವನ್ನೂ ಓದಿ...

ಭಾರತ–ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌: ಅಜಿಂಕ್ಯ ರಹಾನೆ ಶತಕ

ರಾಂಚಿಯಲ್ಲಿ ರಾರಾಜಿಸಿದ ರೋಹಿತ್–ರಹಾನೆ

 

ಪ್ರತಿಕ್ರಿಯಿಸಿ (+)