ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್; ಎನ್ರಿಚ್ ದಾಳಿಗೆ ಕುಸಿದ ಶ್ರೀಲಂಕಾ

Last Updated 3 ಜನವರಿ 2021, 16:40 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಎನ್ರಿಚ್ ನಾಕಿಯಾ (56ಕ್ಕೆ6) ದಾಳಿಗೆ ಶ್ರೀಲಂಕಾ ತಂಡವು ಭಾನುವಾರ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆರಂಭವಾದ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿಯಿತು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 40.3 ಓವರ್‌ಗಳಲ್ಲಿ 157 ರನ್‌ ಗಳಿಸಿ ಆಲೌಟ್ ಆಯಿತು. ಆರಂಭಿಕ ಬ್ಯಾಟ್ಸ್‌ಮನ್ ಕುಸಾಲ ಪೆರೆರಾ (60; 67ಎ) ಅವರು ಅರ್ಧಶತಕ ಗಳಿಸಿದರು. ಆದರೆ ಎನ್ರಿಚ್ ಮತ್ತು ವಿಯಾನ್ ಮಲ್ದಾರ್ (25ಕ್ಕೆ3) ಅವರ ದಾಳಿಯ ಮುಂದೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್‌ ಆಡಲಿಲ್ಲ.

ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಕೊನೆಗೆ 37 ಓವರ್‌ಗಳಲ್ಲಿ 1 ವಿಕೆಟ್‌ಗೆ 148 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ (ಬ್ಯಾಟಿಂಗ್ 92) ಶತಕದ ಸನಿಹದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಶ್ರೀಲಂಕಾ: 40.3 ಓವರ್‌ಗಳಲ್ಲಿ 157 (ಕುಸಾಲ ಪೆರೆರಾ 60, ವಾನಿಡು ಹಸರಂಗ 29, ಚಾಮೀರಾ 22, ಎನ್ರಿಚ್ ನಾಕಿಯಾ 56ಕ್ಕೆ6, ವಿಯಾನ್ ಮಲ್ದರ್ 25ಕ್ಕೆ3), ದಕ್ಷಿಣ ಆಫ್ರಿಕಾ: 37 ಓವರ್‌ಗಳಲ್ಲಿ 1 ವಿಕೆಟ್‌ಗೆ 148 (ಡೀನ್ ಎಲ್ಗರ್ ಬ್ಯಾಟಿಂಗ್ 92, ರಸಿ ವ್ಯಾನ್ ಡರ್ ಡಸೆನ್ ಬ್ಯಾಟಿಂಗ್ 40)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT