ಭಾನುವಾರ, ಜನವರಿ 17, 2021
27 °C

ಐಪಿಎಲ್‌ ಫೈನಲ್‌: ಚೆನ್ನೈ ವಿರುದ್ಧ ಟಾಸ್‌ ಗೆದ್ದ ಮುಂಬೈ -ಬ್ಯಾಟಿಂಗ್‌ ಆಯ್ಕೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಇಲ್ಲಿನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಎರಡೂ ತಂಡಗಳಿಗೆ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕ. ಚೆನ್ನೈ ಸೂಪರ್ ಕಿಂಗ್ಸ್‌ ಸತತ ಎರಡನೇ ಬಾರಿ ಟ್ರೋಫಿಗೆ ಮುತ್ತಿಡುವ ಕನಸು ಹೊತ್ತಿದ್ದರೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ರಾಜನಾಗಿ ಮೆರೆಯುವ ನಿರೀಕ್ಷೆ ಇದೆ. 

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಮೂರು ಬಾ‌ರಿ ಪ್ರಶಸ್ತಿ ಗೆದ್ದಿವೆ. ಈ ಬಾರಿ ಯಾರು ಗೆದ್ದರೂ ಅದು ಹೊಸ ದಾಖಲೆಯಾಗಿದೆ. ಯಾಕೆಂದರೆ ಐಪಿಎಲ್‌ನ ಹಿಂದಿನ 11 ಆವೃತ್ತಿಗಳಲ್ಲಿ ಯಾವ ತಂಡವೂ ನಾಲ್ಕು ಬಾರಿ ಚಾಂಪಿಯನ್ ಆಗಲಿಲ್ಲ. ಸತತ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಉಮೇದಿನೊಂದಿಗೆ ಮಹೇಂದ್ರ ಸಿಂಗ್ ಧೋನಿ ಪಡೆ ಕಣಕ್ಕೆ ಇಳಿಯಲಿದೆ.

ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಫೈನಲ್‌ನಲ್ಲಿ ಗೆಲುವು ಯಾರಿಗೆ ಎಂದು ಭವಿಷ್ಯ ನುಡಿಯಲು ಕ್ರಿಕೆಟ್ ತಜ್ಞರು ಕೂಡ ಪರದಾಡುತ್ತಿದ್ದಾರೆ. ಅಭಿಮಾನಿಗಳಂತೂ ತಾವು ಬೆಂಬಲಿಸುವ ತಂಡವೇ ಗೆದ್ದು ಬೀಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಸೂಪರ್‌ ಕಿಂಗ್ಸ್ ತಂಡವನ್ನು ಲೀಗ್ ಹಂತದಲ್ಲೂ ಕ್ವಾಲಿಫೈಯರ್‌ ಪಂದ್ಯದಲ್ಲೂ ಸೋಲಿಸಿರುವುದರಿಂದ ಮುಂಬೈ ಇಂಡಿಯನ್ಸ್‌ನ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ಯಾವುದೇ ತಂಡವನ್ನು ಹಣಿಯುವ ತಂತ್ರಗಾರಿಕೆ ಹೆಣೆಯಲು ಸಾಧ್ಯವಿರುವ ಮಹೇಂದ್ರ ಸಿಂಗ್‌ ಧೋನಿ ಮುಂಬೈ ವಿರುದ್ಧದ ಸೇಡು ತೀರಿಸಿಕೊಂಡು ಪಂದ್ಯ ಗೆಲ್ಲುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

ತಂಡಗಳು ಇಂತಿವೆ
ಚೆನ್ನೈ ಸೂಪರ್ ಕಿಂಗ್ಸ್‌:
ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್‌), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವಾಟ್ಸನ್‌, ಫಾಫ್ ಡು ಪ್ಲೆಸಿ, ಮುರಳಿ ವಿಜಯ್‌, ರವೀಂದ್ರ ಜಡೇಜ, ಧ್ರುವ ಶೋರೆ, ಚೈತನ್ಯ ಬಿಷ್ಣೋಯ್‌, ಋತುರಾಜ್ ಗಾಯಕವಾಡ್‌, ಡ್ವೇನ್ ಬ್ರಾವೊ, ಕರಣ್ ಶರ್ಮಾ, ಇಮ್ರಾನ್ ತಾಹೀರ್, ಹರಭಜನ್ ಸಿಂಗ್‌, ಮಿಷೆಲ್ ಸ್ಯಾಂಟನರ್‌, ಶಾರ್ದೂಲ್‌ ಠಾಕೂರ್, ಮೋಹಿತ್ ಶರ್ಮಾ, ಕೆ.ಎಂ.ಆಸಿಫ್‌, ದೀಪಕ್ ಚಾಹರ್‌, ಎನ್‌.ಜಗದೀಶನ್‌, ಸ್ಕಾಟ್‌ ಕುಗೆಲಿನ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್‌), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಮಿಷೆಲ್‌ ಮೆಕ್‌ಲೆನಾಗನ್‌, ಮಯಂಕ್ ಮಾರ್ಕಂಡೆ, ರಾಹುಲ್ ಚಾಹರ್‌, ಜಸ್‌ಪ್ರೀತ್ ಬೂಮ್ರಾ, ಅನ್ಮೋಲ್ ಪ್ರೀತ್‌ ಸಿಂಗ್‌, ಸಿದ್ದೇಶ್ ಲಾಡ್‌, ಅನುಕೂಲ್ ರಾಯ್‌, ಎವಿನ್ ಲ್ಯೂವಿಸ್‌, ಜೈಸ್ವಾಲ್, ಬೆನ್ ಕಟಿಂಗ್, ಇಶಾನ್ ಕಿಶನ್, ಆದಿತ್ಯ ತಾರೆ, ರಸಿಕ್ ಸಲಾಮ್, ಬರಿಂದರ್ ಸ್ರಾನ್, ಜಯಂತ್ ಯಾದವ್, ಬ್ಯೂರನ್ ಹೆನ್ರಿಕ್ಸ್, ಲಸಿತ್ ಮಾಲಿಂಗ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು