ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ರೈಸರ್ಸ್ ಬೌಲಿಂಗ್‌ ವಿಭಾಗಕ್ಕೆ ನಟರಾಜನ್ ಬಲ: ಸಂಜಯ್ ಬಂಗಾರ್

Last Updated 8 ಅಕ್ಟೋಬರ್ 2020, 13:42 IST
ಅಕ್ಷರ ಗಾತ್ರ

ಅನುಭವಿ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರುಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರೂ, ಎಡಗೈ ವೇಗಿ ಟಿ ನಟರಾಜನ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಂಜಯ್‌ ಬಂಗಾರ್‌ ಹೇಳಿದ್ದಾರೆ.

ಅಕ್ಟೋಬರ್‌ 2ರಂದು ದುಬೈನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ಗಾಯಗೊಂಡಿದ್ದರು. ಸದ್ಯ ಅವರು ಟೂರ್ನಿಯಿಂದ ಹೊರನಡೆದಿದ್ದು, ಅವರ ಜಾಗದಲ್ಲಿ ಆಂಧ್ರಪ್ರದೇಶದ 22 ವರ್ಷದ ಎಡಗೈ ವೇಗಿ ಫೃಥ್ವಿರಾಜ್‌ ಯರ್ರಾ ತಂಡ ಕೂಡಿಕೊಂಡಿದ್ದಾರೆ.

ನಟರಾಜನ್‌ ಬೌಲಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಂಗಾರ್‌, ಭುವಿ ಅನುಪಸ್ಥಿತಿಯಿಂದಾಗಿ ಡೇವಿಡ್‌ ವಾರ್ನರ್‌ ಪಡೆಯಲ್ಲಿ ಡೆತ್ ಓವರ್‌ ಬೌಲಿಂಗ್‌ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ, ತಮಿಳುನಾಡು ವೇಗಿ ನಟರಾಜನ್ ಅದನ್ನು ನಿವಾರಿಸಿದ್ದಾರೆ.29ರ ವೇಗಿ ಅತ್ಯಂತ ಕಠಿಣ ಸನ್ನಿವೇಶದಲ್ಲಿಯೂ ಅತ್ಯುತ್ತಮ ಎಸೆತಗಳನ್ನು ಪ್ರಯೋಗಿಸಿದ್ದಾರೆ. ಚೆಂಡು ತೇವವಾಗಿದ್ದಾಗಲೂ ಅವರು ಯಾರ್ಕರ್‌ಗಳನ್ನು ಎಸೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

‘ಈ ಮಾದರಿಯ ಕ್ರಿಕೆಟ್‌ನಲ್ಲಿ ಯಾರ್ಕರ್ ಹಾಕುವುದು ತುಂಬಾಕಷ್ಟ. ಅದರಲ್ಲೂ ಚೆಂಡು ತೇವವಾಗಿದ್ದಾಗ ಇನ್ನೂಕಠಿಣ. ಅದರ ಹೊರತಾಗಿಯೂ ಕಳೆದ ಪಂದ್ಯದಲ್ಲಿ ನಟರಾಜನ್‌ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಎಸ್‌ಆರ್‌ಎಚ್‌ ಬಳಗದಲ್ಲಿ ತಲೆದೋರಿದ್ದ ಡೆತ್‌ ಓವರ್‌ ಬೌಲಿಂಗ್‌ ಮಾಡುವ ಸಮಸ್ಯೆಯನ್ನು ಅವರು ಬಗೆಹರಿಸಿದ್ದಾರೆ. ಎಡಗೈ ವೇಗಿ ಉತ್ತಮ ಲಯದಲ್ಲಿರುವಂತೆ ಕಾಣುತ್ತಾರೆ. ಈ ಬಾರಿ ಐಪಿಎಲ್‌ನಲ್ಲಿ ನನ್ನನ್ನು ಆಕರ್ಷಿತನನ್ನಾಗಿಸಿದ ನನ್ನ ನೆಚ್ಚಿನ ಆಟಗಾರ ಅವರು’ ಎಂದು ‘ಸ್ಟಾರ್‌ ಸ್ಪೋರ್ಟ್ಸ್‌’ ಕ್ರೀಡಾ ವಾಹಿನಿಗೆ ತಿಳಿಸಿದ್ದಾರೆ.

ಐಪಿಎಲ್‌–2020ಯಲ್ಲಿ ಅವರು ಒಟ್ಟು 5 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ರೈಸರ್ಸ್‌ ತಂಡ ಇಂದು ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT