ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪ್ರಕರಣ ಹೆಚ್ಚಳ, ಆತಂಕದಲ್ಲಿ ಆಟಗಾರರು: ಡೇವಿಡ್ ಹಸ್ಸಿ

Last Updated 26 ಏಪ್ರಿಲ್ 2021, 13:47 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪೋಷಕ, ಆಸ್ಟ್ರೇಲಿಯಾದ ಡೇವಿಡ್ ಹಸ್ಸಿ ‘ಭಾರತದಲ್ಲಿ ಕೋವಿಡ್ ಹೆಚ್ಚುತ್ತಿರುವುದರಿಂದ ಆಸ್ಟ್ರೇಲಿಯಾ ಆಟಗಾರರು ವಾಪಸ್ ಹೋಗುವ ತವಕದಲ್ಲಿದ್ದಾರೆ. ತವರು ಸೇರಲು ಸಾಧ್ಯವೇ ಎಂಬ ಆತಂಕದಲ್ಲಿರುವ ಆಟಗಾರರು ಇನ್ನೂ ಇದ್ದಾರೆ’ ಎಂದು ಹೇಳಿರುವುದಾಗಿ ‘ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ ವರದಿ ಮಾಡಿದೆ.

ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಆಸ್ಟ್ರೇಲಿಯಾ ಕ್ರಿಕೆಟರ್‌ಗಳ ಸಂಸ್ಥೆ ಸೋಮವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು ಪರಿಸ್ಥಿತಿಯ ಅವಲೋಕನ ಮಾಡಲಾಗುತ್ತಿದೆ ಎಂದು ಹೇಳಿವೆ.

ಐಪಿಎಲ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನ ಅನೇಕ ಆಟಗಾರರು ಕೂಡ ಆಡುತ್ತಿದ್ದು ಜೂನ್ ಎರಡರಿಂದ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಆರಂಭವಾಗುವುದರಿಂದ ನ್ಯೂಜಿಲೆಂಡ್ ಆಟಗಾರರು ಯಾವುದೇ ಕ್ಷಣದಲ್ಲಿ ವಾಪಸಾಗುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾದ 14 ಮಂದಿ ಇನ್ನೂ ಐಪಿಎಲ್‌ನಲ್ಲಿ ಉಳಿದಿದ್ದಾರೆ. ಸ್ಟೀವ್ ಸ್ಮಿತ್‌, ಡೇವಿಡ್ ವಾರ್ನರ್‌, ಪ್ಯಾಟ್ ಕಮಿನ್ಸ್‌ ಇವರಲ್ಲಿ ಪ್ರಮುಖರು. ಕೋಚ್‌ಗಳಾದ ರಿಕಿ ಪಾಂಟಿಂಗ್‌ (ಡೆಲ್ಲಿ) ಮತ್ತು ಸೈಮನ್ ಕ್ಯಾಟಿಚ್‌ (ಬೆಂಗಳೂರು) ಅವರೂ ಇದ್ದು ವೀಕ್ಷಕ ವಿವರಣೆಕಾರರ ತಂಡದಲ್ಲಿ ಮ್ಯಾಥ್ಯೂ ಹೇಡನ್‌, ಬ್ರೆಟ್‌ ಲೀ, ಮೈಕೆಲ್ ಸ್ಲೇಟರ್ ಮತ್ತು ಲಿಸಾ ಸ್ಥಳೇಕರ್ ಇದ್ದಾರೆ.

ಹೋಗುವವರು ಹೋಗಬಹುದು: ಬಿಸಿಸಿಐ
ಸೋಮವಾರ ಮಧ್ಯಾಹ್ನ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ ‘ಸದ್ಯದ ಪರಿಸ್ಥಿತಿಯಲ್ಲಿ ಟೂರ್ನಿ ಮುಂದುವರಿಯಲಿದೆ. ಈ ನಡುವೆ ಯಾರಿಗಾದರೂ ಮನೆಗೆ ಹೋಗಬೇಕು ಎಂದೆನಿಸಿದರೆ ಹೋಗಬಹುದು. ಅದಕ್ಕೆ ಅಡ್ಡಿ ಇಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT