IPL 2021: ಆಟಗಾರರ ರಿಟೇನ್, ಬಿಡುಗಡೆ, ಫ್ರಾಂಚೈಸಿ ಪರ್ಸ್ ಮೌಲ್ಯದ ಸಂಪೂರ್ಣ ಪಟ್ಟಿ

ಬೆಂಗಳೂರು: ಬಹುನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೂ ಮೊದಲಾಗಿ ಎಲ್ಲ ಫ್ರಾಂಚೈಸಿಗಳು ಪ್ರಮುಖ ಬದಲಾವಣೆಗಳನ್ನು ತಂದಿದೆ. ಮುಂಬರುವ 2021 ಮಿನಿ ಹರಾಜನ್ನು ಗುರಿಯಾಗಿರಿಸಿಕೊಂಡು ಕೆಲವು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ.
ರಾಜಸ್ಥಾನ ರಾಯಲ್ಸ್ ತಂಡವು ನಾಯಕ ಸ್ಟೀವನ್ ಸ್ಮಿತ್ ಅವರನ್ನು ಕೈಬಿಟ್ಟಿದೆ. ಅಲ್ಲದೆ ಮಹತ್ವದ ನಿರ್ಧಾರದಲ್ಲಿ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ನಾಯಕತ್ವ ಜವಾಬ್ದಾರಿ ವಹಿಸಿಕೊಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಟಾರ್ ಆಟಗಾರ ಆ್ಯರೋನ್ ಫಿಂಚ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆ ಮಾಡಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಗ್ಲೆನ್ ಮ್ಯಾಕ್ಸ್ವೆಲ್ಗೆ ಗೇಟ್ ಪಾಸ್ ನೀಡಿದೆ. ಅಲ್ಲದೆ ಹರಾಜಿಗೂ ಮುನ್ನ ಅತಿ ಹೆಚ್ಚು ₹53 ಕೋಟಿ ಪರ್ಸ್ ಮೌಲ್ಯವನ್ನು ಹೊಂದಿದೆ.
ಹಾಲಿ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಿಂದ ಬಿಡುಗಡೆಗೊಂಡ ಬೆನ್ನಲ್ಲೇ ವೇಗದ ಬೌಲರ್ ಲಸಿತ್ ಮಾಲಿಂಗ, ಫ್ರಾಂಚೈಸಿ ಕ್ರಿಕೆಟ್ಗೆ ನಿವೃತ್ತಿ ಸಲ್ಲಿಸಿದ್ದಾರೆ.
🚨NEWS🚨 - 𝐈𝐏𝐋 𝟐𝟎𝟐𝟏 𝐏𝐥𝐚𝐲𝐞𝐫 𝐫𝐞𝐭𝐞𝐧𝐭𝐢𝐨𝐧𝐬
No of players retained by the franchises - 1⃣3⃣9⃣
No of players released - 5⃣7⃣More details 👇
— IndianPremierLeague (@IPL) January 21, 2021
ಅತ್ತ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹರ್ಭಜನ್ ಸಿಂಗ್ ಅವರನ್ನು ಬಿಡುಗಡೆ ಮಾಡಿದೆ. ಇನ್ನು ಡೆಲ್ಲಿ ತಂಡವು ಜೇಸನ್ ರಾಯ್, ಕೋಲ್ಕತ್ತ ತಂಡವು ಟಾಮ್ ಬ್ಯಾಂಟನ್, ಹೈದರಾಬಾದ್ ತಂಡವು ಬಲ್ಲಿ ಸ್ಟಾನ್ಲೇಕ್ ಸೇರಿದಂತೆ ಅನೇಕ ಪ್ರಮುಖ ಆಟಗಾರರನ್ನು ಬಿಡುಗಡೆಗೊಳಿಸಿದೆ. ಈ ಸಂಬಂಧ ಸಮಗ್ರ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.
ಇದನ್ನೂ ಓದಿ: RCB Players: ಆರ್ಸಿಬಿಯಲ್ಲಿ ಉಳಿದ ಪಡಿಕ್ಕಲ್, 10 ಆಟಗಾರರ ಬಿಡುಗಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆ್ಯಡಂ ಜಾಂಪಾ, ಜೋಶ್ ಪಿಲಿಪ್, ಶಹಬಾಜ್ ಅಹ್ಮದ್ ಮತ್ತು ಪವನ್ ದೇಶಪಾಂಡೆ.
ಬಿಡುಗಡೆಗೊಂಡ ಆಟಗಾರರು: ಆ್ಯರೋನ್ ಫಿಂಚ್, ಕ್ರಿಸ್ ಮೊರಿಸ್, ಇಸುರು ಉದಾನ, ಮೊಯಿನ್ ಅಲಿ, ಪವನ್ ನೇಗಿ, ಗುರ್ಕೀರಾತ್ ಸಿಂಗ್ ಮನ್, ಶಿವಂ ದುಬೆ, ಡೇನ್ ಸ್ಟೇನ್, ಪಾರ್ಥಿವ್ ಪಟೇಲ್ ಮತ್ತು ಉಮೇಶ್ ಯಾದವ್.
Retained Royal Challengers
They are back! Introducing the 1️⃣2️⃣ Royal Challengers who will be donning the RCB Red and Gold to #PlayBold again in 2️⃣0️⃣2️⃣1️⃣. 🌟 #WeAreChallengers #IPLRetention #IPL2021 pic.twitter.com/3p9qAJGAsK
— Royal Challengers Bangalore (@RCBTweets) January 20, 2021
ಮುಂಬೈ ಇಂಡಿಯನ್ಸ್:
ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಕ್ರಿಸ್ ಲಿನ್, ಅನ್ಮೋಲ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃುಣಾಲ್ ಪಾಂಡ್ಯ, ಅನುಕುಲ್ ರಾಯ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಮೊಹಸಿನ್ ಖಾನ್
ಬಿಡುಗಡೆಗೊಂಡ ಆಟಗಾರರು: ಲಸಿತ್ ಮಾಲಿಂಗ, ಮಿಚ್ ಮೆಗ್ಲೆಂಕನ್, ಜೇಮ್ಸ್ ಪ್ಯಾಟಿನ್ಸನ್, ನಥನ್ ಕೌಲ್ಟರ್ ನೈಲ್, ಶೆರ್ಫಾನೆ ರುಥರ್ಫಾರ್ಡ್, ಪ್ರಿನ್ಸ್ ಬಲ್ವಂತ್ ರಾಯ್, ದ್ವಿಗ್ವಿಜಯ್ ದೇಶ್ಮುಖ್
ಚೆನ್ನೈ ಸೂಪರ್ ಕಿಂಗ್ಸ್:
ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಎನ್ ಜಗದೀಶನ್, ಆರ್ ಗಾಯಕ್ವಾಡ್, ಕೆಎಂ ಆಸಿಫ್, ರವೀಂದ್ರ ಜಡೇಜ, ಜೋಶ್ ಹ್ಯಾಜಲ್ವುಡ್, ಕೆ ಶರ್ಮಾ, ಅಂಬಟಿ ರಾಯುಡು, ಸುರೇಶ್ ರೈನಾ, ಇಮ್ರಾನ್ ತಾಹೀರ್, ರಾಹುಲ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದೂಲ್ ಠಾಕೂರ್, ಮಿಚೆಲ್ ಸ್ನಾಂಟ್ನರ್, ಡ್ವೇಯ್ನ್ ಬ್ರಾವೋ, ಲುಂಗಿ ಎನ್ಗಿಡಿ, ಸ್ಯಾಮ್ ಕರ್ರನ್, ಎಸ್ ಕಿಶೋರ್.
ಬಿಡುಗಡೆಗೊಂಡ ಆಟಗಾರರು: ಹರಭಜನ್ ಸಿಂಗ್, ಕೇದರ್ ಜಾಧವ್, ಪಿಯೂಷ್ ಚಾವ್ಲಾ, ಶೇನ್ ವಾಟ್ಸನ್, ಮುರಳಿ ವಿಜಯ್, ಮೋನು ಸಿಂಗ್.
ರಾಜಸ್ಥಾನ ರಾಯಲ್ಸ್:
ಉಳಿಸಿಕೊಂಡ ಆಟಗಾರರು: ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ರಿಯನ್ ಪರಾಗ್, ಶ್ರೇಯಸ್ ಗೋಪಾಲ್, ರಾಹುಲ್ ತೇವಾತಿಯ, ಮಹಿಪಾಲ್ ಲೊಮ್ರರ್, ಕಾರ್ತಿಕ್ ತ್ಯಾಗಿ, ಆ್ಯಂಡ್ರ್ಯೂ ಟೈ, ಜಯದೇವ್ ಉನಾದ್ಕತ್, ಮಯಂಕ್ ಮಾರ್ಕಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನನ್ ವೋಹ್ರಾ ಮತ್ತು ರಾಬಿನ್ ಉತ್ತಪ್ಪ
ಬಿಡುಗಡೆಗೊಂಡ ಆಟಗಾರರು: ಸ್ಟೀವನ್ ಸ್ಮಿತ್, ಅಂಕಿತ್ ರಜಪೂತ್, ಒಶಾನೆ ಥಾಮಸ್, ಆಕಾಶ್ ಸಿಂಗ್, ವರುಣ್ ಆ್ಯರೋನ್, ಟಾಮ್ ಕರ್ರನ್, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್
ಡೆಲ್ಲಿ ಕ್ಯಾಪಿಟಲ್ಸ್:
ಉಳಿಸಿಕೊಂಡ ಆಟಗಾರರು: ಶಿಖರ್ ಧವನ್, ಪಾರ್ಥಿವ್ ಪಟೇಲ್, ಅಜಿಂಕ್ಯ ರಹಾನೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಆರ್. ಅಶ್ವಿನ್, ಲಲಿತ್ ಯಾದವ್, ಹರ್ಷಲ್ ಪಟೇಲ್, ಅವೇಶ್ ಖಾನ್, ಪ್ರವೀಣ್ ದುಬೇ, ಕಗಿಸೊ ರಬಡ, ಆನ್ರಿಚ್ ನಾರ್ಜೆ, ಮಾರ್ಕಸ್ ಸ್ಟೋಯ್ನಿಸ್, ಶಿಮ್ರಾನ್ ಹೆಟ್ಮಾಯೆರ್, ಕ್ರಿಸ್ ವೋಕ್ಸ್ ಮತ್ತು ಡ್ಯಾನಿಯಲ್ ಸ್ಯಾಮ್ಸ್.
ಬಿಡುಗಡೆಗೊಂಡ ಆಟಗಾರರು: ಮೋಹಿತ್ ಶರ್ಮಾ, ತುಷಾರ್ ದೇಶಪಾಂಡೆ, ಕೀಮೊ ಪೌಲ್, ಸಂದೀಪ್ ಲಮಿಚಾನೆ, ಅಲೆಕ್ಸ್ ಕ್ಯಾರಿ ಮತ್ತು ಜೇಸನ್ ರಾಯ್.
ಇದನ್ನೂ ಓದಿ: ಫ್ರ್ಯಾಂಚೈಸ್ ಕ್ರಿಕೆಟ್ಗೆ ಲಸಿತ್ ಮಾಲಿಂಗ ವಿದಾಯ
ಕೋಲ್ಕತ್ತ ನೈಟ್ ರೈಡರ್ಸ್:
ಉಳಿಸಿಕೊಂಡ ಆಟಗಾರರು: ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಭಮನ್ ಗಿಲ್, ರಿಂಕು ಸಿಂಗ್, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರ್ಕೋಟಿ, ಕುಲ್ದೀಪ್ ಯಾದವ್, ಲೂಕಿ ಫೆರ್ಗ್ಯೂಸನ್, ಪ್ಯಾಟ್ ಕಮಿನ್ಸ್, ಪ್ರಸಿದ್ದ ಕೃಷ್ಣ, ಸಂದೀಪ್ ವಾರಿಯರ್, ಶಿವಂ ದುಬೆ, ವರುಣ್ ಚಕ್ರವರ್ತಿ, ಆ್ಯಂಡ್ರೆ ರಸೆಲ್, ಸುನಿಲ್ ನರೇನ್ ಮತ್ತು ಟಿಮ್ ಸೀಫರ್ಟ್.
ಬಿಡುಗಡೆಗೊಂಡ ಆಟಗಾರರು: ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್, ನಿಖಿಲ್ ನಾಯ್ಕ್, ಸಿದ್ದಾರ್ಥ್ ಎಂ ಮತ್ತು ಸಿದ್ದೇಶ್ ಲಾಡ್
ಸನ್ರೈಸರ್ಸ್ ಹೈದರಾಬಾದ್:
ಉಳಿಸಿಕೊಂಡ ಆಟಗಾರರು: ಡೇವಿಡ್ ವಾರ್ನರ್, ಅಭಿಷೇಕ್ ಶರ್ಮಾ, ಬಾಸಿಲ್ ತಂಪಿ, ಭುವನೇಶ್ವರ್ ಕುಮಾರ್, ಜಾನಿ ಬೈರ್ಸ್ಟೋ, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಂ, ಶ್ರೀವಾಸ್ತವ್ ಗೋಸ್ವಾಮಿ, ಸಿದ್ದಾರ್ಥ್ ಕೌಲ್, ಖಲೀಲ್ ಅಹ್ಮದ್, ಟಿ. ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ಮಿಚೆಲ್ ಮಾರ್ಶ್, ಜೇಸನ್ ಹೋಲ್ಡರ್, ಪ್ರಿಯಂ ಗಾರ್ಗ್, ವಿರಾಟ್ ಸಿಂಗ್.
ಬಿಡುಗಡೆಗೊಂಡ ಆಟಗಾರರು: ಸಂಜಯ್ ಯಾದವ್, ಬಿ. ಸಂದೀಪ್, ಬಿಲ್ಲಿ ಸ್ಟಾನ್ಲೇಕ್, ಫ್ಯಾಬಿಯನ್ ಅಲೆನ್ ಮತ್ತು ಯರ್ರಾ ಪೃಥ್ವಿರಾಜ್
ಕಿಂಗ್ಸ್ ಇಲೆವೆನ್ ಪಂಜಾಬ್:
ಉಳಿಸಿಕೊಂಡ ಆಟಗಾರರು: ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಂಕ್ ಅಗರವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಪ್ರಭಾಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜಾರ್ಡನ್, ದರ್ಶನ್ ನಾಲ್ಕಂಡೆ, ರವಿ ಬಿಶ್ನೋಯ್, ಮುರುಗನ್ ಅಶ್ವಿನ್, ಅರ್ಶ್ದೀಪ್ ಸಿಂಗ್, ಹರ್ಪೀತ್ ಬ್ರಾರ್ ಮತ್ತು ಇಶಾನ್ ಪೊರೆಲ್.
ಬಿಡುಗಡೆಗೊಂಡ ಆಟಗಾರರು: ಗ್ಲೆನ್ ಮ್ಯಾಕ್ಸ್ವೆಲ್, ಕರುಣ್ ನಾಯರ್, ಹರ್ಡಸ್ ವಿಲ್ಜಿಯೋನ್, ಜಗದೀಶ ಸುಚಿತ್, ಮುಜೀಬ್ ಉರ್ ರೆಹ್ಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೃಷ್ಣಪ್ಪ ಗೌತಮ್, ತಜಿಂದರ್ ಸಿಂಗ್.
ಎಲ್ಲ 8 ಫ್ರಾಂಚೈಸಿಗಳ ಬಾಕಿ ಉಳಿದಿರುವ ಪರ್ಸ್ ಮೌಲ್ಯ:
ಕಿಂಗ್ಲ್ ಇಲೆವೆನ್ ಪಂಜಾಬ್: ₹53.2 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹35.7 ಕೋಟಿ
ರಾಜಸ್ಥಾನ ರಾಯಲ್ಸ್: ₹34.85 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: ₹22.9 ಕೋಟಿ
ಮುಂಬೈ ಇಂಡಿಯನ್ಸ್: ₹15.35 ಕೋಟಿ
ಕೋಲ್ಕತ್ತ ನೈಟ್ ರೈಡರ್ಸ್: ₹10.85 ಕೋಟಿ
ಸನ್ರೈಸರ್ಸ್ ಹೈದರಾಬಾದ್: ₹10.75 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: ₹9 ಕೋಟಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.