ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | KKR vs PBKS: ಕೆಕೆಆರ್ ವಿರುದ್ಧ ಪಂಜಾಬ್‌ಗೆ ರೋಚಕ ಗೆಲುವು
LIVE

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್ ಅಂತರದ ಅರ್ಹ ಗೆಲುವು ದಾಖಲಿಸಿದೆ. ನಾಯಕನ ಆಟವಾಡಿದ ಕೆ.ಎಲ್. ರಾಹುಲ್ ಪಂಜಾಬ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
Last Updated 1 ಅಕ್ಟೋಬರ್ 2021, 18:23 IST
ಅಕ್ಷರ ಗಾತ್ರ
18:2201 Oct 2021

ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಪಂಜಾಬ್ ಪ್ಲೇ ಆಫ್ ಕನಸು ಜೀವಂತ

18:2201 Oct 2021

ಶಾರೂಕ್ ಖಾನ್ ಸಿಕ್ಸರ್; ಪಂಜಾಬ್ ಗೆಲುವಿನ ರೋಚಕ ಕ್ಷಣ

18:0201 Oct 2021

ಕೋಲ್ಕತ್ತ ವಿರುದ್ಧ ಪಂಜಾಬ್‌ಗೆ ಅರ್ಹ ಗೆಲುವು

ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ (67) ಹಾಗೂ ಮಯಂಕ್ ಅಗರವಾಲ್ (40) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಈ ಮೂಲಕ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕೋಲ್ಕತ್ತ,  ವೆಂಕಟೇಶ್ ಅಯ್ಯರ್ ಅರ್ಧಶತಕದ (67) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು. 

ಬಳಿಕ ನಾಯಕನ ಆಟವಾಡಿದ ರಾಹುಲ್ ಹಾಗೂ ಮಯಂಕ್ ನೆರವಿನಿಂದ ಪಂಜಾಬ್ ತಂಡವು ಇನ್ನು ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ ಗುರಿ ತಲುಪಿತು. 

17:4201 Oct 2021

ರಾಹುಲ್ ತ್ರಿಪಾಠಿ ಅತ್ಯುತ್ತುಮ ಕ್ಯಾಚ್

17:3401 Oct 2021

ರೋಚಕ ಹಂತದಲ್ಲಿ ಪಂದ್ಯ

17:2301 Oct 2021

ರಾಹುಲ್ ಆಕರ್ಷಕ ಅರ್ಧಶತಕ

15 ಓವರ್ ಅಂತ್ಯಕ್ಕೆ ಪಂಜಾಬ್ ಎರಡು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. ಅಲ್ಲದೆ ಅಂತಿಮ 30 ಎಸೆತಗಳಲ್ಲಿ ತಂಡದ ಗೆಲುವಿಗೆ 45 ರನ್ ಅಗತ್ಯವಿತ್ತು. ನಾಯಕನ ಆಟವಾಡಿದ ರಾಹುಲ್ ಆಕರ್ಷಕ ಅರ್ಧಶತಕ ಗಳಿಸಿ ಕ್ರೀಸಿನಲ್ಲಿದ್ದಾರೆ. 

17:0101 Oct 2021

ಪೂರನ್ ಸಿಕ್ಸರ್ ಬಾರಿಸಿದ ಮುಂದಿನ ಎಸೆತದಲ್ಲೇ ಔಟ್ ಮಾಡಿದ ಚಕ್ರವರ್ತಿ

16:5101 Oct 2021

40 ರನ್ ಗಳಿಸಿ ಮಯಂಕ್ ಔಟ್

ರಾಹುಲ್ ಹಾಗೂ ಮಯಂಕ್ ಮೊದಲ ವಿಕೆಟ್‌ಗೆ 70 ರನ್‌ಗಳ ಜೊತೆಯಾಟ ನೀಡಿದರು. ಈ ಸಂದರ್ಭದಲ್ಲಿ 40 ರನ್ ಗಳಿಸಿದ ಮಯಂಕ್ ಔಟಾದರು. 10 ಓವರ್ ಅಂತ್ಯಕ್ಕೆ ಪಂಜಾಬ್ ಒಂದು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತು. 

16:3001 Oct 2021

ರಾಹುಲ್-ಮಯಂಕ್ ಉತ್ತಮ ಜೊತೆಯಾಟ

ಗುರಿ ಬೆನ್ನತ್ತಿದ ಪಂಜಾಬ್‌ಗೆ ಆರಂಭಿಕರಾದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಂಕ್ ಅಗರವಾಲ್ ಉತ್ತಮ ಆರಂಭವೊದಗಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿತ್ತು. 

15:4601 Oct 2021

ಅಯ್ಯರ್ ಫಿಫ್ಟಿ; ಕೋಲ್ಕತ್ತ 165/7

ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಆಕರ್ಷಕ ಅರ್ಧಶತಕದ (67) ನೆರವಿನಿಂದ ಕೋಲ್ಕತ್ತ ನೈಡ್ ರೈಡರ್ಸ್, ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 165 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

ಅಯ್ಯರ್‌ಗೆ ಉತ್ತಮ ಸಾಥ್ ನೀಡಿದ ರಾಹುಲ್ ತ್ರಿಪಾಠಿ 34 ರನ್‌ಗಳ ಕಾಣಿಕೆ ನೀಡಿದರು. ಕೊನೆಯ ಹಂತದಲ್ಲಿ ನಿತೀಶ್ ರಾಣಾ ಕೂಡ 34 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಪಂಜಾಬ್ ಪರ ಅರ್ಷ್‌ದೀಪ್ ಸಿಂಗ್ ಮೂರು ಮತ್ತು ರವಿ ಬಿಷ್ಣೋಯಿ ಎರಡು ವಿಕೆಟ್ ಕಬಳಿಸಿ ಮಿಂಚಿದರು.