ನವದೆಹಲಿ: ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಂಬಟಿ ರಾಯುಡು ಅಬ್ಬರದ ಬ್ಯಾಟಿಂಗ್ ಮುಂದೆ ಮುಂಬೈ ಇಂಡಿಯನ್ಸ್ ಬೌಲರ್ಗಳು ದಿಕ್ಕು ತಪ್ಪಿದರು.

ಅತ್ತ ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ ಒಂದು ವಿಕೆಟ್ ಪಡೆದರೂ 56 ರನ್ಗಳನ್ನು ಬಿಟ್ಟುಕೊಟ್ಟಿರುವ ಜಸ್ಪ್ರೀತ್ ಬೂಮ್ರಾ ದುಬಾರಿಯೆನಿಸಿದರು.

ಇದು ಐಪಿಎಲ್ನಲ್ಲಿ ಬೂಮ್ರಾ ತೆತ್ತಿರುವ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಆರು ವರ್ಷಗಳ ಹಿಂದೆ 2015ರಲ್ಲಿ ಡೆಲ್ಲಿ ವಿರುದ್ಧ 55 ರನ್ ಬಿಟ್ಟುಕೊಟ್ಟಿದ್ದರು.

ಚೆನ್ನೈ ಹಾಗೂ ಮುಂಬೈ ನಡುವಣ ಕದನ ರೋಚಕತೆ ಮೂಡಿಸಿತ್ತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 218 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.

ಫಫ್ ಡುಪ್ಲೆಸಿ (50; 28ಎ), ಮೋಯಿನ್ ಅಲಿ (58; 36ಎ) ಮತ್ತು ಕೊನೆಯಲ್ಲಿ ಕೇವಲ 27 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದ ರಾಯುಡು, ಮುಂಬೈ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದರು.

ಚೆನ್ನೈ ಇನ್ನಿಂಗ್ಸ್ನಲ್ಲಿ ಎರಡು ಶತಕದ ಜೊತೆಯಾಟ ದಾಖಲಾಗಿದ್ದವು. ಮೊದಲಿಗೆ ಫಫ್ ಹಾಗೂ ಅಲಿ ಎರಡನೇ ವಿಕೆಟ್ಗೆ 108 ಮತ್ತು ಕೊನೆಯಲ್ಲಿ ರಾಯುಡು ಹಾಗೂ ಜಡೇಜ ಮುರಿಯದ ಐದನೇ ವಿಕೆಟ್ಗೆ 102 ರನ್ಗಳ ಜೊತೆಯಾಟ ಕಟ್ಟಿದರು.

ಮೊಯಿನ್ 33, ಫಫ್ 27 ಹಾಗೂ ರಾಯುಡು 20 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಂತಿಮವಾಗಿ 27 ಎಸೆತಗಳನ್ನು ಎದುರಿಸಿದ ರಾಯುಡು ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಹಾಗೂ ಏಳು ಸಿಕ್ಸರ್ಗಳು ಸೇರಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.