ಮಂಗಳವಾರ, ಅಕ್ಟೋಬರ್ 26, 2021
21 °C

IPL 2021: ಡೆಲ್ಲಿ ವಿರುದ್ಧ ಗೆದ್ದ ಬಳಿಕ ಚೆನ್ನೈ ನಾಯಕ ಧೋನಿ ಮಾಡಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಐಪಿಎಲ್‌ನಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಹಣಾಹಣಿಯಲ್ಲಿ ನಾಲ್ಕು ವಿಕೆಟ್ ಅಂತರದ ಜಯ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ.

ಕೊನೆಯ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೇವಲ ಆರು ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿ ಚೆನ್ನೈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಇದನ್ನೂ ಓದಿ: 

ಈ ಸಂದರ್ಭದಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸ್ಟೇಡಿಯಂನಲ್ಲಿದ್ದ ಇಬ್ಬರು ಪುಟ್ಟ ಮಕ್ಕಳಂತೂ ಭಾವನೆಗಳನ್ನು ತಡೆದುಕೊಳ್ಳಲಾಗದೇ ಗಳಗಳನೇ ಅಳುತ್ತಿರುವ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತ್ತು.

 

 

 

ಇದನ್ನು ಗಮನಿಸಿದ ನಾಯಕ ಧೋನಿ, ಮ್ಯಾಚ್ ಬಾಲ್‌ಗೆ ಸಹಿ ಹಾಕಿ ಮಕ್ಕಳಿಗೆ ಉಡುಗೊರೆಯಾಗಿ ನೀಡಿದರು. ಈ ಮೂಲಕ ಪುಟ್ಟ ಅಭಿಮಾನಿಗಳಲ್ಲಿ ತಮ್ಮ ಪ್ರೀತಿಯನ್ನು ತೋರಿದರು.

 

ಚೆನ್ನೈ ತಂಡವು ಅಭಿಮಾನಿಗಳೊಂದಿಗೆ ಭಾವನಾತ್ಮಕ ನಂಟನ್ನು ಹೊಂದಿದೆ. ಕಳೆದ ವರ್ಷ ತಂಡವು ಕಳಪೆ ಪ್ರದರ್ಶನ ನೀಡಿದಾಗ ಅಭಿಮಾನಿಗಳು ಬೆನ್ನಿಗೆ ನಿಂತಿದ್ದರು. ಧೋನಿ ಕೂಡ ಸಂದರ್ಭ ಸಿಕ್ಕಾಗೆಲ್ಲ ಚೆನ್ನೈ ಅಭಿಮಾನಿಗಳನ್ನು ಸ್ಮರಿಸಲು ಮರೆಯುವುದಿಲ್ಲ.

 

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು