ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ರಿಚರ್ಡ್ಸನ್ ಔಟ್; ಆರ್‌ಸಿಬಿ ತಂಡಕ್ಕೆ ಕಿವೀಸ್ ವೇಗಿ ಸೇರ್ಪಡೆ

Last Updated 28 ಏಪ್ರಿಲ್ 2021, 12:00 IST
ಅಕ್ಷರ ಗಾತ್ರ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯನ್ನು ಅರ್ಧದಲ್ಲಿ ತೊರೆದು ತವರಿಗೆ ಮರಳಿರುವ ಆಸ್ಟ್ರೇಲಿಯಾ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಬದಲಿ ಆಟಗಾರನ ಸ್ಥಾನಕ್ಕೆ ನ್ಯೂಜಿಲೆಂಡ್ ವೇಗದ ಬೌಲರ್ ಸ್ಕಾಟ್ ಕುಗೆಲಿಜಿನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸೇರ್ಪಡೆಗೊಳಿಸಿದೆ.

ಈ ಕುರಿತು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಆರ್‌ಸಿಬಿ ಶಿಬಿರವನ್ನು ತೊರೆದು ಸ್ವದೇಶಕ್ಕೆ ಮರಳಲು ಕೇನ್ ರಿಚರ್ಡ್ಸನ್ ನಿರ್ಧರಿಸಿದ್ದರು.

ಕೇನ್ ರಿಚರ್ಡ್ಸನ್ ಸ್ಥಾನಕ್ಕೆ ನ್ಯೂಜಿಲೆಂಡ್ ವೇಗದ ಬೌಲರ್ ಸ್ಕಾಟ್ ಕುಗೆಲಿಜಿನ್ ಆಗಮನದೊಂದಿಗೆ ಆರ್‌ಸಿಬಿ ಬೌಲಿಂಗ್ ವಿಭಾಗವು ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ಮುಂಬೈ ಇಂಡಿಯನ್ಸ್ ನೆಟ್ ಬೌಲರ್ ಆಗಿ ಸ್ಕಾಟ್ ಅವರು ನವದೆಹಲಿಯಲ್ಲಿದ್ದರು. ಏಪ್ರಿಲ್ 27ರಂದು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಆದ ಬಳಿಕ ಅಹಮದಾಬಾದ್‌ನಲ್ಲಿರುವ ಆರ್‌ಸಿಬಿ ಕ್ಯಾಂಪ್ ಅನ್ನು ಸೇರ್ಪಡೆಯಾಗಿದ್ದಾರೆ. ಈ ಮೂಲಕ ಐಸಿಸಿ ನಿಯಮಾವಳಿಯಂತೆ ಬಯೋಬಬಲ್‌ನಿಂದ ಬಯೋಬಬಲ್‌ಗೆ ವರ್ಗಾವಣೆಯಾಗಿದ್ದಾರೆ.

ನ್ಯೂಜಿಲೆಂಡ್ ಪರ ಕುಗೆಲಿಜಿನ್ ಎರಡು ಏಕದಿನ ಹಾಗೂ 16 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಹಾಗೆಯೇ 2019ರಲ್ಲಿ ಚೆನ್ನೈ ಸೂಪರ್ ಕಿಂಗ್ಸ ಪರ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಅಲ್ಲದೆ ಆಡಿರುವ ಎರಡು ಪಂದ್ಯಗಳಲ್ಲಿ ಅಷ್ಟೇ ವಿಕೆಟ್‌ಗಳನ್ನು ಕಬಳಿಸಿದ್ದರು.

ಹಾಗಿದ್ದರೂ ಆರ್‌ಸಿಬಿ ಬಯೋಬಬಲ್ ತೊರೆದಿರುವ ಮಗದೋರ್ವ ಆಟಗಾರ ಆ್ಯಡಂ ಜಂಪಾ ಅವರಿಗೆ ಬದಲಿ ಆಟಗಾರರನ್ನು ಹೆಸರಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT