ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | PBKS vs DC: ಮಯಂಕ್ ಮೀರಿಸಿದ ಗಬ್ಬರ್ ಆಟ; ಡೆಲ್ಲಿಗೆ 7 ವಿಕೆಟ್ ಜಯ
LIVE

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಅಹಮದಾಬಾದ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಶಿಖರ್ ಧವನ್ ಆಕರ್ಷಕ ಅರ್ಧಶತಕ (69*) ಬಾರಿಸುವ ಮೂಲಕ ಡೆಲ್ಲಿ ಗೆಲುವನ್ನು ಸುಲಭಗೊಳಿಸಿದರು. ಅತ್ತ ಪಂಜಾಬ್ ಉಸ್ತುವಾರಿ ನಾಯಕ ಮಯಂಕ್ ಅಗರವಾಲ್ ಹೋರಾಟವು (ಅಜೇಯ 99) ವ್ಯರ್ಥವೆನಿಸಿತು.
Last Updated 2 ಮೇ 2021, 17:46 IST
ಅಕ್ಷರ ಗಾತ್ರ
17:4502 May 2021

ಡೆಲ್ಲಿ ನಂ.1

17:4502 May 2021

ಡೆಲ್ಲಿ ದರ್ಬಾರ್

17:4402 May 2021

ಮಯಂಕ್ ಹೋರಾಟ ವ್ಯರ್ಥ; ಡೆಲ್ಲಿ ವಿರುದ್ಧ ಮುಗ್ಗರಿಸಿದ ಪಂಜಾಬ್

17:2602 May 2021

ಡೆಲ್ಲಿಗೆ 7 ವಿಕೆಟ್ ಅಂತರದ ಭರ್ಜರಿ ಗೆಲುವು

ಅಹಮದಾಬಾದ್: ಗಬ್ಬರ್ ಖ್ಯಾತಿಯ ಶಿಖರ್ ಧವನ್ ಆಕ್ರಮಣಕಾರಿ ಅರ್ಧಶತಕದ (69*) ಬೆಂಬಲದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಇದರೊಂದಿಗೆ ಆಡಿರುವ ಎಂಟು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಒಟ್ಟು 12 ಅಂಕಗಳನ್ನು ಸಂಪಾದಿಸಿರುವ ರಿಷಭ್ ಪಂತ್ ಬಳಗವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಪಂಜಾಬ್ ಎಂಟು ಪಂದ್ಯಗಳಲ್ಲಿ ಆರು ಅಂಕಗಳೊಂದಿಗೆ ಆರನೇ ಸ್ಥಾನದಲ್ಲೇ ಮುಂದುವರಿದಿದೆ. 

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಉಸ್ತುವಾರಿ ಕ್ಯಾಪ್ಟನ್ ಮಯಂಕ್ ಅಗರವಾಲ್ ಅಜೇಯ 99 ರನ್ ಬೆಂಬಲದೊಂದಿಗೆ 166 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಡೆಲ್ಲಿಗೆ ಅನುಭವಿ ಶಿಖರ್ ಧವನ್ ಹಾಗೂ ಯುವ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮಗದೊಮ್ಮೆ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 6.1 ಓವರ್‌ಗಳಲ್ಲೇ 63 ರನ್ ಪೇರಿಸಿದರು. 

ಈ ಹಂತದಲ್ಲಿ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಶಾ ಅವರನ್ನು ಹರ್‌ಪ್ರೀತ್ ಬ್ರಾರ್ ಕ್ಲೀನ್ ಬೌಲ್ಡ್. ಕಳೆದ ಪಂದ್ಯದಲ್ಲಿ ಕೊಹ್ಲಿ, ಮ್ಯಾಕ್ಸ್‌ವೆಲ್, ಎಬಿ ಡಿ ವಿಕೆಟ್ ಪಡೆದಿದ್ದ ಹರ್‌ಪ್ರೀತ್ ಮಗದೊಮ್ಮೆ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. 

ಇದಕ್ಕೆ ಧವನ್ ಹಾಗೂ ಸ್ಟೀವನ್ ಸ್ಮಿತ್ (24) ಅವಕಾಶ ನೀಡಲಿಲ್ಲ. ಸ್ಮಿತ್ ಜೊತೆಗೂ 48 ರನ್ ಜೊತೆಯಾಟದಲ್ಲಿ ಭಾಗಿಯಾದ ಧವನ್ ಡೆಲ್ಲಿಯನ್ನು ಗೆಲುವಿನತ್ತ ಮುನ್ನಡೆಸಿದರು. 

ಕೇವಲ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಧವನ್ ಬಳಿಕ ನಾಯಕ ರಿಷಭ್ ಪಂತ್ (14) ಹಾಗೂ ಶಿಮ್ರಾನ್ ಹೆಟ್ಮೆಯರ್ (16*) ಜೊತೆಗೂಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಈ ಮೂಲಕ 17.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು. 

47 ಎಸೆತಗಳನ್ನು ಎದುರಿಸಿದ ಧವನ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 69 ರನ್ ಗಳಿಸಿ ಅಜೇಯರಾಗುಳಿದರು. 

17:1602 May 2021

ಗೆಲುವಿನತ್ತ ಡೆಲ್ಲಿ

17:1502 May 2021

35 ಎಸೆತಗಳಲ್ಲಿ ಧವನ್ ಫಿಫ್ಟಿ ಸಾಧನೆ

16:4102 May 2021

ಮತ್ತೆ ಕೈಚಳಕ ತೋರಿದ ಹರ್‌ಪ್ರೀತ್ ಬ್ರಾರ್

16:3102 May 2021

ಪವರ್ ಪ್ಲೇನಲ್ಲಿ 63/0

16:2302 May 2021

ರಾಹಲ್ ಅನುಪಸ್ಥಿತಿಯಲ್ಲಿ ನಾಯಕತ್ವ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ ಮಯಂಕ್

15:4802 May 2021

ಮಯಂಕ್ ಮಾಸ್ಟರ್ ಕ್ಲಾಸ್ ಆಟ