ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿರುವ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಅತಿ ಸ್ಮರಣೀಯವೆನಿಸಿದೆ.

ಐಪಿಎಲ್ ಇತಿಹಾಸದಲ್ಲೇ 200 ಪಂದ್ಯಗಳನ್ನು ಆಡಿದ ದಾಖಲೆಗೆ ಆರ್ಸಿಬಿ ಪಾತ್ರವಾಗಲಿದೆ. ಇದು ಆರ್ಸಿಬಿ ಜೊತೆಗೆ ಅಭಿಮಾನಿಗಳ ಪಾಲಿಗೆ ಅತ್ಯಂತ ಸಂತಸದಾಯಕ ವಿಷಯವಾಗಿದೆ.

2008ನೇ ಇಸವಿಯಲ್ಲಿ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ಗೆ ಚಾಲನೆ ದೊರಕಿತ್ತು. ಅಲ್ಲಿಂದ ಬಳಿಕ ಐಪಿಎಲ್ 14ನೇ ಆವೃತ್ತಿಗೆ ಕಾಲಿಟ್ಟಿದ್ದು, ಆರ್ಸಿಬಿ ಇದುವರೆಗೆ 199 ಪಂದ್ಯಗಳನ್ನು ಆಡಿದೆ.

ಇದನ್ನೂ ಓದಿ:ಆರ್ಸಿಬಿ ಸೇರಿದ ದಿನದಿಂದಲೂ ಮನೆಯಲ್ಲಿರುವಂತೆಯೇ ಭಾಸವಾಗುತ್ತದೆ: ಮ್ಯಾಕ್ಸ್ವೆಲ್

ಈ ಪೈಕಿ ಎರಡು 'ಟೈ' ಪಂದ್ಯಗಳಲ್ಲಿ ಗೆಲುವು ಸೇರಿದಂತೆ ಒಟ್ಟು 94 ಪಂದ್ಯಗಳಲ್ಲಿ ವಿಜಯ ದಾಖಲಿಸಿದೆ. ಹಾಗೆಯೇ ಇನ್ನೊಂದು ಟೈ ಪಂದ್ಯ ಸೇರಿದಂತೆ 101 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನು ನಾಲ್ಕು ಪಂದ್ಯಗಳಲ್ಲಿ ಫಲಿತಾಂಶ ದಾಖಲಾಗಲಿಲ್ಲ.

ಮುಂಬೈ ಇಂಡಿಯನ್ಸ್ ಬಳಿಕ ಐಪಿಎಲ್ನಲ್ಲಿ 200 ಪಂದ್ಯವನ್ನಾಡಿದ ಎರಡನೇ ತಂಡವೆಂಬ ಹೆಗ್ಗಳಿಕೆಗೆ ಆರ್ಸಿಬಿ ಪಾತ್ರವಾಗಲಿದೆ.

ಆರ್ಸಿಬಿ ಮೊದಲ ಆವೃತ್ತಿಯಿಂದಲೂ ತಂಡದ ಜೊತೆಗಿರುವ ನಾಯಕ ವಿರಾಟ್ ಕೊಹ್ಲಿ, ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ಮೂರು ಬಾರಿಯ ರನ್ನರ್-ಅಪ್ ತಂಡವು ತನ್ನ ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿದೆ. ಈ ಬಾರಿಯಾದರೂ ಆರ್ಸಿಬಿ ಪ್ರಶಸ್ತಿ ಕನಸು ಈಡೇರಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

ಇದನ್ನೂ ಓದಿ:IPL 2021 LIVE | RCB vs RR: ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಆರ್ಸಿಬಿ Live

ಆರ್ಸಿಬಿ ಅಂಕಿಅಂಶ (2008-2021)
ಪಂದ್ಯ: 199
ಗೆಲುವು: 92
ಸೋಲು: 100
ಟೈ (ಗೆಲುವು): 2
ಟೈ (ಸೋಲು): 1
ಫಲಿತಾಂಶವಿಲ್ಲ: 4
ಶೇಕಡವಾರು ಗೆಲುವು: 47.94

ಅಂದಿನ ಈ ದಿನದಂದು (2009 ಏ.22ರಂದು) ವಿರಾಟ್ ಕೊಹ್ಲಿ ಆರ್ಸಿಬಿ ಪರ ಚೊಚ್ಚಲ ಐಪಿಎಲ್ ಫಿಫ್ಟಿ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.