ಬೆಂಗಳೂರು: ಟ್ವೆಂಟಿ–20 ಕ್ರಿಕೆಟ್ ಮಾದರಿಯೆಂದರೆ ಬೌಲರ್‌ಗಳಿಗೆ ದುಃಸ್ವಪ್ನವೆಂಬ ಮಾತಿತ್ತು. ಸಿಕ್ಸರ್, ಬೌಂಡರಿಗಳ ಭರಾಟೆಯಲ್ಲಿ ಬೌಲರ್‌ಗಳ ಕೌಶಲಗಳು ಸಮಾಧಿಯಾಗುತ್ತವೆ ಎಂಬ ಆತಂಕದ ಮಾತುಗಳು ಆರಂಭದ ಕೆಲ ವರ್ಷಗಳಲ್ಲಿ ಕೇಳಿಬಂದಿದ್ದವು. ಆದರೆ, ಕಾಲಕ್ರಮೇಣ ಬೌಲರ್‌ಗಳೂ ಪುಟಿದೆದ್ದರು. ತಮ್ಮ ಎಸೆತಗಳಲ್ಲಿ ವಿಭಿನ್ನತೆ ರೂಢಿಸಿಕೊಂಡರು. ಅಬ್ಬರದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವಲ್ಲಿ ಸಫಲರಾದರು.

ಅದರಲ್ಲೂ ಕಳೆದ ಮೂರು ಋತುಗಳ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇತಿಹಾಸವನ್ನು ಕೆದಕಿದರೆ ಬೌಲರ್‌ಗಳೂ ಕಮ್ಮಿಯೇನಿಲ್ಲ. ಡಾಟ್‌ಬಾಲ್‌ಗಳನ್ನು ಬಹಳಷ್ಟು ಸಂಖ್ಯೆಯಲ್ಲಿ ಪ್ರಯೋಗಿಸುತ್ತಿದ್ದಾರೆ. ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಭಾರತದ ಮಧ್ಯಮವೇಗಿ ಮೊಹಮ್ಮದ್ ಶಮಿ, ಪ್ರಸಿದ್ಧ ಕೃಷ್ಣ ಇದರಲ್ಲಿ ಪ್ರಮುಖರು. ಒಂದೆಡೆ ಬ್ಯಾಟ್ಸ್‌ಮನ್‌ಗಳು ಸಿಕ್ಸರ್‌ಗಳು ರಂಗೇರಿದರೆ ಅವರ ಕಡಿವಾಣ ಹಾಕುವ ಪ್ರಯತ್ನದಲ್ಲಿ ಬೌಲರ್‌ಗಳೂ ಕಠಿಣ ಪೈಪೋಟಿಯೊಡ್ಡುತ್ತಿದ್ದಾರೆ.

14ನೇ ಆವೃತ್ತಿ ಐಪಿಎಲ್‌ನ ಪ್ರಥಮಾರ್ಧದ ಅಂಕಿ ಸಂಖ್ಯೆಗಳನ್ನೇ ನೋಡಿ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರ ನಡುವೆಯೂ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ನಿಕ್, ರಿವರ್ಸ್ ಸ್ವಿಂಗ್, ಫಿಂಗರ್ ಸ್ಪಿನ್, ವೈಡ್ ಮತ್ತು ಸ್ಲೋವರ್ ಎಸೆತಗಳ ಭರಾಟೆಯೂ ಹೆಚ್ಚುತ್ತಿದೆ. ಆದ್ದರಿಂದಲೇ ಈ ಮಾದರಿ ಮತ್ತು ಟೂರ್ನಿ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ.

ಹೆಚ್ಚು ಡಾಟ್‌ಬಾಲ್ ಹಾಕಿದವರು

ಬೌಲರ್

ಪಂದ್ಯ

ಓವರ್

ರನ್

ವಿಕೆಟ್

ಡಾಟ್‌ಬಾಲ್

ಮೊಹಮ್ಮದ್ ಶಮಿ

8

28.4

234

8

76

ಮೊಹಮ್ಮದ್ ಸಿರಾಜ್

7

26

191

6

74

ಟ್ರೆಂಟ್ ಬೌಲ್ಟ್

7

26.2

223

8

73

ಆವೇಶ್ ಖಾನ್

8

30

231

14

72

ಪ್ರಸಿದ್ಧಕೃಷ್ಣ

8

26.3

243

8

69

ಹೆಚ್ಚು ಸಿಕ್ಸರ್ ಬಾರಿಸಿದವರು

ಬ್ಯಾಟ್ಸ್‌ಮನ್

ಪಂದ್ಯ

ರನ್

ಶ್ರೇಷ್ಠ

ಸಿಕ್ಸರ್

ಕೆ.ಎಲ್. ರಾಹುಲ್

7

331

91*

16

ಜಾನಿ ಬೆಸ್ಟೊ

7

248

63*

15

ಅಂಬಟಿ ರಾಯುಡು

7

136

72*

13

ಜೊಸ್ ಬಟ್ಲರ್

7

254

124

13

ಆ್ಯಂಡ್ರೆ ರಸೆಲ್

7

163

54

13

ಮಾಹಿತಿ: ಐಪಿಎಲ್ ವೆಬ್‌ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.