ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಜೇಸನ್ ಹೋಲ್ಡರ್‌ ಮೇಲೆ ಆರ್‌ಸಿಬಿ ಕಣ್ಣು

ಇಂಡಿಯನ್‌ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯ ಮೆಗಾ ಹರಾಜು
Last Updated 7 ಫೆಬ್ರುವರಿ 2022, 13:35 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವೆಸ್ಟ್ ಇಂಡೀಸ್‌ನ ಪ್ರಮುಖ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಭಾರಿ ಮೊತ್ತಕ್ಕೆ ತನ್ನದಾಗಿಸಿಕೊಳ್ಳುವ ನಿರೀಕ್ಷೆಯಿದೆ.

‘ಫ್ರಾಂಚೈಸ್ ಈಗಾಗಲೇ ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊಹಮ್ಮದ್‌ ಸಿರಾಜ್ ಅವರನ್ನು ಉಳಿಸಿಕೊಂಡಿದೆ. ಬಹು ಕೌಶಲಗಳನ್ನು ಹೊಂದಿರುವ ಹೋಲ್ಡರ್ ಅವರನ್ನು ತನ್ನದಾಗಿಸಿಕೊಳ್ಳಲು ₹ 12 ಕೋಟಿ ವ್ಯಯಿಸುವ ಸಾಧ್ಯತೆಯಿದೆ‘ ಎಂದುಹರಾಜು ಪ್ರಕ್ರಿಯೆಗೆ ಆರ್‌ಸಿಬಿ ತಂತ್ರದ ಕುರಿತು ಮೂಲಗಳು ತಿಳಿಸಿವೆ.

‘ವಿಶ್ವದ ಪ್ರಮುಖ ಆಲ್‌ರೌಂಡರ್‌ಗಳಾದ ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಈಗಾಗಲೇ ಬೇರೆ ಬೇರೆ ತಂಡಗಳಲ್ಲಿದ್ದಾರೆ. ಗಾಯದ ಕಾರಣ ಮಿಚೆಲ್‌ ಮಾರ್ಷ್ ಆಡುತ್ತಾರೊ ಇಲ್ಲವೊ ಎಂಬುದು ತಿಳಿದಿಲ್ಲ. ಹೋಲ್ಡರ್‌ ಅವರ ದಾಖಲೆಗಳು ಅಸಾಧಾರಣವಾಗಿವೆ. ಅವರನ್ನು ಹೊಂದಲು ಆರ್‌ಸಿಬಿ ಆಸಕ್ತಿ ತೋರಬಹುದು‘ ಎಂದು ಮೂಲಗಳು ತಿಳಿಸಿವೆ.

ಆರ್‌ಸಿಬಿ ಪರ್ಸ್‌ನಲ್ಲಿ ಸದ್ಯ ₹ 57 ಕೋಟಿರೂಪಾಯಿ ಇದೆ. ಹೋಲ್ಡರ್‌, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟರ್‌ ಅಂಬಟಿ ರಾಯುಡು ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಯುವ ಪ್ರತಿಭೆ ರಿಯಾನ್ ಪರಾಗ್ ಅವರನ್ನು ಹೊಂದಲು ಫ್ರಾಂಚೈಸ್ ಆಸಕ್ತಿ ವಹಿಸಿದೆ.

‘ಹೋಲ್ಡರ್‌ಗೆ ₹12 ಕೋಟಿ ಮತ್ತು ರಾಯುಡುಗೆ ₹ 8 ಕೋಟಿ ಮತ್ತು ಪರಾಗ್‌ಗೆ ₹ 7 ಕೋಟಿ ಕಾಯ್ದಿರಿಸಿದ್ದಾರೆ. ಅವರು ಈ ಆಟಗಾರರಿಗೆ ಸರಿಸುಮಾರು 27 ಕೋಟಿ ರೂ. ಖರ್ಚು ಮಾಡಿದರೆ, ಫ್ರಾಂಚೈಸ್‌ ಬಳಿ ಇನ್ನೂ ₹ 28 ಕೋಟಿ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT